Saturday, 14th December 2024

Justin Trudeau: ಒಂದು ಕ್ಷಣಕ್ಕೂ ನಿಮ್ಮನ್ನು ನಂಬಲ್ಲ…ಜಸ್ಟಿನ್‌ ಟ್ರೂಡೊ ವಿರುದ್ಧ ಸಿಟ್ಟಿಗೆದ್ದ ಕಾರ್ಮಿಕ-ವಿಡಿಯೋ ವೈರಲ್‌

Justin Trudeau

ಕೆನಡಾ: ರಾಜಕೀಯ ಮುಖಂಡರು ಎದುರಿಗೆ ಸಿಕ್ಕಾಗ ಅವರ ಜೊತೆ ಸೆಲ್ಫಿ ತಗೊಂಡು ಕೈಕುಲುಕಿ ಸಂಭ್ರಮಿಸುವವರೂ ಹಲವರಿದ್ದಾರೆ. ಹಾಗೆಯೇ ಅವರ ಆಡಳಿತದ ಬಗ್ಗೆ ಅತೃಪ್ತಿ ಇದ್ದರಲ್ಲಿ ಸಾರ್ವಜನಿಕವಾಗಿಯೇ ಅವರ ಎದುರೇ ಅದನ್ನು ಪ್ರತಿಭಟಸುವುದನ್ನೂ ಕಾಣುತ್ತಿರುತ್ತೇವೆ. ಅಂತಹದ್ದೇ ಒಂದು ಸ್ಥಿತಿ ಕೆನಡಾ ಪ್ರಧಾನಿ(Canadian Prime Minister)  ಜಸ್ಟಿನ್‌ ಟ್ರೂಡೊ(Justin Trudeau)ಗೂ ಎದುರಾಗಿದೆ. ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕನೋರ್ವ ಟ್ರೂಡೊ ವಿರುದ್ಧ ಎಲ್ಲರೆದುರೇ ಅಕ್ರೋಶ ಹೊರಹಾಕಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral video) ಆಗಿದೆ.

ಕೆನಡಾದಲ್ಲಿ ಉಕ್ಕಿನ ಕಾರ್ಮಿಕರೊಂದಿಗೆ ಮಾತನಾಡಲು ಬಂದಿದ್ದ ಪಿಎಂ ಜಸ್ಟಿನ್ ಟ್ರುಡೊ ಉದ್ಯೋಗಿಯೊಬ್ಬರಿಂದ ವಿರೋಧ ಎದುರಿಸಬೇಕಾಯಿತು. ಶುಕ್ರವಾರ ಕಾರ್ಖಾನೆಯೊಂದಕ್ಕೆ ಬಂದಿದ್ದ ಅವರು, ಉದ್ಯೋಗಿಗಳೊಂದಿಗೆ ಫೊಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.  ಇದೇ ವೇಳೆ ಅಲ್ಲಿದ್ದ ಉದ್ಯೋಗಿಯೊಬ್ಬರು ದೇಶದಲ್ಲಿ ಹಣದುಬ್ಬರ ಮತ್ತು ಹೆಚ್ಚಿನ ತೆರಿಗೆಗಳ ಬಗ್ಗೆ ಟೀಕಿಸಿದ್ದಾನೆ. ಅಲ್ಲದೇ ಟ್ರೂಡೊ ಆಡಳಿತನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾನೆ.

ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಚೀನಾದ ಮೇಲೆ ನಾವು ತಂದಿರುವ ಶೇ.25ರಷ್ಟು ಸುಂಕ ನಿಮಗೆ ನೆರವಾಗಲಿದೆ ಎಂದು ಟ್ರೂಡೊ ಹೇಳುತ್ತಿದ್ದಾರೆ. ನಿಮ್ಮ ಕೆಲಸ ಸುರಕ್ಷಿತವಾಗಿ ಉಳಿಯುತ್ತದೆ. ನಾನು ನಿಮ್ಮ ಮತ್ತು ನಿಮ್ಮ ಉದ್ಯೋಗದಲ್ಲಿ ಹೂಡಿಕೆ ಮಾಡಲಿದ್ದೇನೆ ಎಂದು ಹೇಳುತ್ತಿದ್ದರು.

ಅವರ ಮಾತುಗಳನ್ನು ಕೇಳಿ ಅಲ್ಲಿ ನಿಂತಿದ್ದ ಉಕ್ಕಿನ ಕೆಲಸಗಾರನಿಗೆ ಕೋಪ ಬಂತು.  ನಾನು ಪಾವತಿಸುತ್ತಿರುವ 40 ಪ್ರತಿಶತ ತೆರಿಗೆಯ ಬಗ್ಗೆ ಏನು ಹೇಳುತ್ತೀರಿ? ನನ್ನ ಬಳಿ ವೈದ್ಯರೂ ಇಲ್ಲ.  ನಾನು ನನ್ನ ದಂತ ವಿಮೆಯನ್ನು ಸಹ ಪಾವತಿಸುತ್ತಿದ್ದೇನೆ. ಪೂರ್ಣಾವಧಿ ಉದ್ಯೋಗವಿದ್ದರೂ ಪತ್ನಿ ಮತ್ತು ಮಕ್ಕಳನ್ನು ಪೋಷಿಸಲು ಹೆಣಗಾಡುತ್ತಿದ್ದಾರೆ ಎಂದು ಉದ್ಯೋಗಿ ಹೇಳಿದ್ದಾರೆ. ನೀವು ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತೀರಿ ಆದರೆ ನೀವು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ನೋಡಲು ನಾವು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಆತ ಜೋರಾಗಿ ಹೇಳುತ್ತಾನೆ.

ಇದಕ್ಕೆ ಪ್ರತಿಕ್ರಿಯಿಸಿದ ಟ್ರುಡೊ, ‘ಇದಕ್ಕಾಗಿಯೇ ಚುನಾವಣೆಗಳು ನಡೆಯುತ್ತವೆ. ಎಲ್ಲರೂ ಮತ ಚಲಾಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವು ನಿಮ್ಮ ಮತ್ತು ನಿಮ್ಮ ಉದ್ಯೋಗದಲ್ಲಿ ಹೂಡಿಕೆ ಮಾಡುತ್ತೇವೆ. ಅದಕ್ಕೆ ಪ್ರತಿಕ್ರಿಯಿಸಿದ ಉದ್ಯೋಗಿ, ‘ನೀವು ಹೇಳುವುದನ್ನು ನಾನು ಒಂದು ಕ್ಷಣವೂ ನಂಬುವುದಿಲ್ಲ’ ಎಂದರು.

ಕೆನಡಾ ಸರ್ಕಾರದಿಂದ ಚೀನಾದ ಉಕ್ಕಿನ ಮೇಲೆ ತೆರಿಗೆ 
ಕೆನಡಾ ಸರ್ಕಾರವು ಇತ್ತೀಚೆಗೆ ಚೀನಾದ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ 25% ಸುಂಕವನ್ನು ವಿಧಿಸುವುದಾಗಿ ಘೋಷಿಸಿದೆ. ಈ ವಿಡಿಯೋದಲ್ಲಿ ಟ್ರೂಡೊ ಮಾತನಾಡಿದ್ದು ಹೀಗೆ. ಕೆನಡಾ ಚೀನಾದಲ್ಲಿ ತಯಾರಾದ ಎಲೆಕ್ಟ್ರಿಕ್ ವಾಹನಗಳ ಆಮದಿನ ಮೇಲೆ 100% ಸುಂಕವನ್ನು ವಿಧಿಸಿದೆ. ಅಮೆರಿಕ ಸುಂಕ ವಿಧಿಸಿದ ನಂತರ ಕೆನಡಾದ ಈ ಹೆಜ್ಜೆ ಇಡಲಾಗಿದೆ. ಪಾಶ್ಚಿಮಾತ್ಯ ಸರ್ಕಾರಗಳು ಚೀನಾ ಸರ್ಕಾರವು ತನ್ನ ಉದ್ಯಮಕ್ಕೆ ಅನಗತ್ಯ ಸಬ್ಸಿಡಿಗಳನ್ನು ನೀಡುತ್ತದೆ, ಇದು ಅವುಗಳ ಬೆಲೆಗಳನ್ನು ಅಗ್ಗಗೊಳಿಸುತ್ತದೆ ಎಂದು ಹೇಳುತ್ತದೆ. ಇದರಿಂದ ಬೇರೆ ದೇಶಗಳ ಕಂಪನಿಗಳು ನಷ್ಟ ಅನುಭವಿಸುತ್ತಿವೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://x.com/MeghUpdates/status/1830474705515454813