Saturday, 14th December 2024

ಕಾಬೂಲ್‌ನಲ್ಲಿ ಸರಣಿ ಸ್ಫೋಟ: ಇಬ್ಬರು ಪೊಲೀಸರ ಅಧಿಕಾರಿಗಳ ಸಾವು

ಕಾಬೂಲ್: ಆಫ್ಘನ್ ದೇಶದ ರಾಜಧಾನಿಯಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿ , ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಉಗ್ರರು ಪೊಲೀಸ್ ವಾಹನದಲ್ಲಿ ಅಳವಡಿಸಿದ್ದ ಡೆಟೋನೇಟರ್‍ಗಳು ಸ್ಫೋಟ ಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಇಲಾಖೆ ವಕ್ತಾರ ಪರಮಾರ್ಜ್ ತಿಳಿಸಿದ್ದಾರೆ.

ವೆಸ್ಟರ್ನ್ ಕಾಬೂಲ್‍ನಲ್ಲಿ ಪೊಲೀಸ್ ವಾಹನಕ್ಕೆ ಅಳವಡಿಸಿದ್ದ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಗೊಂಡು ಇಬ್ಬರು ಪೊಲೀಸರು ಮೃತಪಟ್ಟು ನಾಗರಿಕರೊಬ್ಬ ಗಾಯಗೊಂಡಿದ್ದಾರೆ. ದಕ್ಷಿಣ ಕಾಬೂಲ್ ಪ್ರಾಂತ್ಯದಲ್ಲಿ ಕಾರಿಗೆ ಅಳವಡಿಸ ಲಾಗಿದ್ದ ಬಾಂಬ್ ಸ್ಫೋಟಗೊಂಡು ಇಬ್ಬರುಪೊಲೀಸ್ ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ತಾಲಿಬಾನ್ ಮತ್ತು ಆಫ್ಘನ್ ಸರ್ಕಾರಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಉಗ್ರರು ನಡೆಸಿರುವ ದಾಳಿ ಆಫ್ಘಾನಿಸ್ತಾನವನ್ನು ಬೆಚ್ಚಿ ಬೀಳಿಸಿದೆ.