ಅಬುಧಾಬಿ: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಉನ್ನತ ನಿಯೋಗದೊಂದಿಗೆ ಯುಎಇ ಗೆ ಬಂದಿಳಿದಿದ್ದಾರೆ.
ತೈಲ ಸಮೃದ್ಧ ಅಬುಧಾಬಿಗೆ ಅಮೆರಿಕದ ಅತ್ಯುನ್ನತ ಮಟ್ಟದ ಭೇಟಿ ಇದಾಗಿದ್ದು ,ಉಕ್ರೇನ್-ರಷ್ಯಾಯುದ್ಧದಿಂದ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಸಂಬಂಧಗಳನ್ನು ಸರಿಪಡಿಸಲು ಪ್ರಯತ್ನದ ಸೂಚಕವಾಗಿದೆ ಎಂಬುವದು ಹೇಳಲಾಗಿದೆ. ಯುಎಇಯ ಪ್ರಬಲ ರಾಷ್ಟ್ರೀಯ ಭದ್ರತಾ ಸಲಹೆಗಾರ ಶೇಖ್ ತಹ್ನೂನ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಹ್ಯಾರಿಸ್ ಅವರನ್ನು ಸ್ವಾಗತಿಸಿದರು.
ನಿಯೋಗದಲ್ಲಿ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಸಿಐಎ ನಿರ್ದೇಶಕ ವಿಲಿಯಂ ಬನ್ಸರ್ ಮತ್ತು ಹವಾಮಾನ ರಾಯಭಾರಿ ಜಾನ್ ಕೆರಿ ಸಹ ಸೇರಿದ್ದಾರೆ.
ಯುಎಇ ಹೊಸ ಅಧ್ಯಕ್ಷರಾಗಿ ಅಬುಧಾಬಿ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನುಬೇಟಿ ಮಾಡಿ ಅಭಿನಂದಿಸಲಿದ್ದಾರೆ. ಇದೇ ವೇಳೆ ಇತ್ತೀಚೆಗೆ ನಿಧನರಾದ ಶೇಖ್ ಖಲೀಫಾ ಅವರಿಗೆ ಶ್ರದ್ದಾಂಜಲಿ ಸಲಿಸಿದ್ದಾರೆ. ಅಮೆರಿಕ-ಯುಎಇ ನಡುವೆ ಉತ್ತಮ ಬಾಂಧವ್ಯ ಎದುರು ನೋಡುತ್ತಿರುವುದ್ದಾಗಿ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೊ ಬಿಡನ್ ಅವರ ಪರವಾಗಿ ನಾನು ಇಲ್ಲಿಗೆ ಬಂದಿದ್ದು, ಪ್ರಸ್ತುತ ಪಾಶ್ಚಿಮಾತ್ಯ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆ ಶಮನಕ್ಕೆ ಕೈಜೊಡಿಸುವುದು ಸಂವೃದ್ದ ಪರಿಸರ ನಿರ್ಮಾಣದತ್ತ ನಮ್ಮ ಪ್ರಯತ್ನ ಎಂದು ಸುದ್ದಿಗಾರರಿಗೆ ತಿಳಿಸಿದರು