ಅಧ್ಯಕ್ಷ ಬೈಡೆನ್ ಅವರು ಅರಿವಳಿಕೆಗೆ ಒಳಗಾದಾಗ ಅಲ್ಪಾವಧಿಗೆ ಉಪಾಧ್ಯಕ್ಷರಿಗೆ ಅಧಿಕಾರವನ್ನು ವರ್ಗಾಯಿಸಲಾಗುತ್ತದೆ. “ಉಪಾಧ್ಯಕ್ಷರು ಈ ಸಮಯದಲ್ಲಿ ವೆಸ್ಟ್ ವಿಂಗ್‌ನಲ್ಲಿರುವ ಅವರ ಕಚೇರಿಯಿಂದ ಕೆಲಸ ಮಾಡುತ್ತಾರೆ.
ಯುಎಸ್ ಸಂವಿಧಾನದ ಪ್ರಕಾರ, ಸೆನೆಟ್‌ನ ಅಧ್ಯಕ್ಷ ಪ್ರೊ ಟೆಂಪೋರ್ ಮತ್ತು ಹೌಸ್ ಆಫ್ ರೆಪ್ರೆ ಸೆಂಟೇಟಿವ್ಸ್ ಸ್ಪೀಕರ್ ಅವರಿಗೆ ಅಧ್ಯಕ್ಷ ಬೈಡನ್ ಅವರು ಈ ಬಗ್ಗೆ ತಿಳಿಸಬೇಕಾಗುತ್ತದೆ.
ಹ್ಯಾರಿಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅಲ್ಪಾವಧಿಯಲ್ಲಿ, ಅವರು ಯುನೈಟೆಡ್ ಸ್ಟೇಟ್ಸ್‌ನ ಇತಿಹಾಸದಲ್ಲಿ ಅಧ್ಯಕ್ಷೀಯ ಅಧಿಕಾರವನ್ನು ಹೊಂದ ಲಿರುವ ಮೊದಲ ಮಹಿಳೆಯಾಗಿದ್ದಾರೆ.
ವಾಷಿಂಗ್ಟನ್ ಡಿಸಿಯ ಹೊರವಲಯದಲ್ಲಿರುವ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಯುಎಸ್ ಅಧ್ಯಕ್ಷರು ಶುಕ್ರವಾರ ತೆರಳಿದರು. ಶನಿವಾರ 79 ವರ್ಷ ವಯಸ್ಸಿನ ಬೈಡನ್ ಅವರು ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ.