ವಾಷಿಂಗ್ಟನ್: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಸಿಬ್ಬಂದಿವರ್ಗಗಳ ಮುಖ್ಯಸ್ಥರನ್ನಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ನೇಮಿಸಲಾಗಿದೆ.
ಟ್ರಂಪ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ರನ್ನು ವಜಾ ಮಾಡಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಕ್ರಿಸ್ ಮಿಲ್ಲರ್ ಅವರನ್ನು ರಕ್ಷಣಾ ಕಾರ್ಯದರ್ಶಿಯಾಗಿ ನೇಮಿಸಿದ ದಿನದ ನಂತರ ಈ ಹೊಸ ಪ್ರಕಟಣೆ ಬಂದಿದೆ.
ಕಾಶ್ ಪಟೇಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕಶ್ಯಪ್ ಪ್ರಮೋದ್ ಪಟೇಲ್ ಅವರು ಈ ಹಿಂದೆ ಹೌಸ್ ಪರ್ಮನೆಂಟ್ ಸೆಲೆಕ್ಟ್ ಕಮಿಟಿಯಲ್ಲಿ ಭಯೋತ್ಪಾದನೆ ನಿಗ್ರಹದ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ನ್ಯೂಯಾರ್ಕ್ ಮೂಲದ ಪಟೇಲ್ ಭಾರತದ ಗುಜರಾತ್ ಮೂಲದವರಾಗಿದ್ದಾರೆ. ಆದರೆ ಪಟೇಲ್ ಅವರ ತಾಯಿ ಪೂರ್ವ ಆಫ್ರಿಕಾದ ಟಾಂಜಾನಿಯಾದ ವರಾದರೆ ತಂದೆ ಉಗಾಂಡಾದವರು.