Friday, 22nd November 2024

Kenya Fire accident: ಕೀನ್ಯಾ ಶಾಲೆಯಲ್ಲಿ ಭಾರೀ ಅಗ್ನಿ ದುರಂತ; 17 ಮಕ್ಕಳು ಸಜೀವ ದಹನ

ಕೀನ್ಯಾ: ಶಾಲೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅ‍ವಘಡ(Kenya Fire accident)ದಲ್ಲಿ 17ವಿದ್ಯಾರ್ಥಿಗಳು ಸಜೀವ ದಹನಗೊಂಡಿದ್ದು, 13 ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೀನ್ಯಾ(Kenya)ದಲ್ಲಿ ನಡೆದಿದೆ. ನೈರಿ ಕೌಂಟಿಯ ಹಿಲ್‌ಸೈಡ್ ಎಂಡರಾಶಾ ಪ್ರಾಥಮಿಕ ಶಾಲೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ದುರಂತದಲ್ಲಿ 17 ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಅನೇಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಮೃತ ಮಕ್ಕಳೆಲ್ಲರೂ ಸುಮಾರು 14 ವರ್ಷ ವಯಸ್ಸಿನವರಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಅಲ್ಲದೇ ಈ ಭೀಕರ ಅಗ್ನಿಅವಘಡಕ್ಕೆ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ನೈರಿ ಕೌಂಟಿ ಕಮಿಷನರ್ ಪಿಯುಸ್ ಮುರುಗು ಮತ್ತು ಶಿಕ್ಷಣ ಸಚಿವಾಲಯವು ಬೆಂಕಿಗೆ ಆಹುತಿಯಾದ ವಸತಿ ನಿಲಯದಲ್ಲಿ 150 ಕ್ಕೂ ಹೆಚ್ಚು ಹುಡುಗರಿಗೆ ವಸತಿ ಕಲ್ಪಿಸಲಾಗಿದೆ ಎಂದು ವರದಿ ಮಾಡಿದೆ. ಹೆಚ್ಚಿನ ಕಟ್ಟಡಗಳು ಮರದ ಹಲಗೆಗಳಿಂದ ನಿರ್ಮಿಸಲ್ಪಟ್ಟಿರುವುದರಿಂದ ಬೆಂಕಿಯು ಬಹಳ ವೇಗವಾಗಿ ಹರಡಿತು ಎನ್ನಲಾಗಿದೆ.

824 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯು ರಾಜಧಾನಿ ನೈರೋಬಿಯದಿಂದ ಉತ್ತರಕ್ಕೆ 200 ಕಿಲೋಮೀಟರ್ (125 ಮೈಲಿಗಳು) ದೂರದಲ್ಲಿ ನಿರ್ಮಾಣಗೊಂಡಿದೆ. ಇನ್ನು ಕೆಲವು ಮಕ್ಕಳಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ದುರ್ಮರಣಕ್ಕೀಡಾದ ಮಕ್ಕಳ ಮೃತ ದೇಹವನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ.

ನಿನ್ನೆಯಷ್ಟೇ ಅಮೆರಿಕ(America Shootout)ದ ಶಾಲೆಯೊಂದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳದಿರುವ ಘಟನೆ ವರದಿಯಾಗಿದೆ. ಜಾರ್ಜಿಯಾದ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ಯಾರೋ ಕಂಟ್ರೀಯ ವಿಂಡರ್‌ನಲ್ಲಿರುವ ಅಪಲಾಚಿ ಪ್ರೌಢ ಶಾಲೆಯಲ್ಲಿ ಬುಧವಾರ ಬೆಳಗ್ಗೆ 10:20ಕ್ಕೆ ಶೂಟೌಟ್‌ ನಡೆದಿದೆ. ಸುಮಾರು 1,900 ವಿದ್ಯಾರ್ಥಿಗಳಿರುವ ಈ ಶಾಲಗೆ ನುಗ್ಗಿದ ಬಂದೂಕುಧಾರಿಯೊಬ್ಬ ಏಕಾಏಕಿ ಗುಂಡು ಹಾರಿಸಿದ್ದಾನೆ. ಗುಂಡೇಟು ತಗುಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಘಟನೆಯಲ್ಲಿ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿದೆ. ಈ ಶಾಲೆಯು ರಾಜ್ಯದ ರಾಜಧಾನಿಯಾದ ಅಟ್ಲಾಂಟಾದಿಂದ ಈಶಾನ್ಯಕ್ಕೆ ಸುಮಾರು 45 ಮೈಲಿಗಳು (70 ಕಿಲೋಮೀಟರ್) ವಿಂಡರ್ ಪಟ್ಟಣದಲ್ಲಿದೆ.

ಘಟನೆ ಬಗ್ಗೆ ಬಗ್ಗೆ ವರದಿಯಾಗುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶೂಟರ್‌ನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಆತನನ್ನು ವಿಚಾರಣೆಗೊಳಪಡಿಸಲಾಗಿದ್ದು, ಘಟನೆಯ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ. ಇದೊಂದು ಉದ್ದೇಶ ರಹಿತ ದಾಳಿಯಾಗಿದೆ. ಇನ್ನು ಶೂಟರ್‌ 14ಬಾಲಕನಾಗಿದ್ದು, ಈತ ಅದೇ ಶಾಲೆಯಲ್ಲಿ ಓಡುತಿದ್ದ ಎನ್ನಲಾಗಿದೆ. ಇನ್ನು ಶೂಟರ್‌ ಬಾಲಕನನ್ನು ಕೋಲ್ಟ್‌ ಗ್ರೇ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನೂ ಓದಿ: America Shootout: ಶಾಲೆಗೆ ನುಗ್ಗಿ ಏಕಾಏಕಿ ಗುಂಡಿನ ದಾಳಿ; ವಿದ್ಯಾರ್ಥಿಗಳು ಸೇರಿ ನಾಲ್ವರು ಬಲಿ; ಬಾಲಕ ಅರೆಸ್ಟ್‌