Friday, 22nd November 2024

ಸೆಲಂಗೋರ್‍ನಲ್ಲಿ ಭೂಕುಸಿತ: 51 ಜನರು ನಾಪತ್ತೆ

ಕೌಲಾಲಂಪುರ್: ಮಲೇಷ್ಯಾದ ಪ್ರವಾಸಿ ತಾಣ ಬಟಾಂಗ್ ಕಾಲಿ ಮತ್ತು ಸೆಂಟ್ರಲ್ ಸೆಲಂಗೋರ್‍ನಲ್ಲಿ ಭೂಕುಸಿತದಿಂದ ಟೆಂಟ್‍ಗಳ ಮೇಲೆ ಮಣ್ಣು ಕುಸಿದು ಸುಮಾರು 51 ಜನರು ನಾಪತ್ತೆಯಾಗಿದ್ದಾರೆ.

ರಾಜಧಾನಿಯ ಕೌಲಾಲಂಪುರ್ ಹೊರ ವುಯದಲ್ಲಿ ದುರ್ಘಟನೆ ನಡೆದಿದೆ. ಸುಮಾರು 79 ಜನರು ಶಿಬಿರದಲ್ಲಿದ್ದರು ಎಂದು ಮಲೇಷ್ಯಾದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಮಗು ಮತ್ತು ಮಹಿಳೆ ಶವ ಪತ್ತೆಯಾಗಿದೆ. ಕಾರ್ಯಾಚರಣೆ ನಡೆಸುತ್ತಿರು ವಾಗ 23 ಜನರನ್ನು ರಕ್ಷಿಸಿ ಗಾಯಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು 51 ನಾಪತ್ತೆಯಾಗಿದ್ದಾರೆ.

ಗುಡ್ಡ ಕುಸಿದು ಅಂದಾಜು 30 ಮೀಟರ್ ಎತ್ತರದಿಂದ ಮಣ್ಣು ಬಿದ್ದಿದೆ ಮತ್ತು ಸುಮಾರು ಮೂರು ಎಕರೆ ಪ್ರದೇಶವನ್ನು ಆವರಿಸಿದೆ.