Friday, 22nd November 2024

Lebanon Pager Explosions: ಲೆಬನಾನ್‌ನಲ್ಲಿ ಸ್ಫೋಟ; ಇಸ್ರೇಲ್ ಕೈವಾಡದ ಬಗ್ಗೆ ಪೇಜರ್‌ ತಯಾರಕ ಕಂಪನಿ ಹೇಳಿದ್ದೇನು?

Lebanon Pager Explosions

ಲೆಬನಾನಿನ ಹೆಜ್ಬೊಲ್ಲಾ ಪೇಜರ್ ಸ್ಫೋಟಕ್ಕೂ (Lebanon Pager Explosions) ತಮಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಇಂಥ ಸಾಧನ ತಯಾರಿಸುವ ತೈವಾನ್‌ನ ಗೋಲ್ಡ್ ಅಪೊಲೊ ಕಂಪನಿಯ ಸಂಸ್ಥಾಪಕ (Taiwan’s Gold Apollo founder) ಹ್ಸು ಚಿಂಗ್-ಕುವಾಂಗ್ ಸ್ಪಷ್ಟಪಡಿಸಿದ್ದಾರೆ. ಲೆಬನಾನ್‌ನ ಸ್ಫೋಟದಲ್ಲಿ ಬಳಸಿರುವ ಪೇಜರ್‌ಗಳನ್ನು (pager blast) ತಮ್ಮ ಕಂಪನಿಯು ತಯಾರಿಸಿಲ್ಲ ಎಂದು ಅವರು ಹೇಳಿದ್ದಾರೆ. ಹೆಜ್ಬೊಲ್ಲಾ ಸದಸ್ಯರು ಬಳಸಿದ ಪೇಜರ್‌ಗಳು ಲೆಬನಾನ್‌ನಾದ್ಯಂತ ಏಕಕಾಲದಲ್ಲಿ ಸ್ಫೋಟಿಸಿದ್ದು, ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 3,000 ಮಂದಿ ಗಾಯಗೊಂಡಿದ್ದಾರೆ.

ಪೇಜರ್‌ಗಳನ್ನು ತೈವಾನ್‌ನ ಗೋಲ್ಡ್ ಅಪೊಲೊದಿಂದ ಹೆಜ್ಬೊಲ್ಲಾ ಆಮದು ಮಾಡಿಕೊಂಡಿತ್ತು. ಈ ಪೇಜರ್‌ಗಳಲ್ಲಿ ಸ್ಫೋಟಕಗಳನ್ನು ಇಟ್ಟು ಇಸ್ರೇಲ್ ಹೆಜ್ಬೊಲ್ಲಾ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕನ್ ಮತ್ತು ಇತರ ಅಧಿಕಾರಿಗಳು ಆರೋಪಿಸಿದ್ದಾರೆ. ಪೇಜರ್‌ಗಳನ್ನು ಸ್ಫೋಟಿಸಿರುವ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೆಜ್ಬೊಲ್ಲಾ ಹೇಳಿದೆ. ಲೆಬನಾನಿನ ಮಾಹಿತಿ ಸಚಿವ ಜಿಯಾದ್ ಮಕಾರಿ ಅವರು ಪೇಜರ್‌ಗಳ ಸ್ಫೋಟವನ್ನು ಖಂಡಿಸಿದರು.

Lebanon Pager Explosions

ಪೇಜರ್ ಸ್ಫೋಟಕ್ಕೆ ಕಾರಣವಾದ ಪ್ರಮುಖ ಅಂಶಗಳು

ಸುಮಾರು ಒಂದೆರಡು ಔನ್ಸ್ ಗಾತ್ರದ ಸ್ಫೋಟಕಗಳನ್ನು ಪೇಜರ್‌ನ ಬ್ಯಾಟರಿಗಳ ಬಳಿ ಇಡಲಾಗಿತ್ತು ಮತ್ತು ಇದನ್ನು ದೂರದಿಂದಲೇ ಸ್ಫೋಟ ಮಾಡಬಹುದಿತ್ತು.

ಮಧ್ಯಾಹ್ನ 3.30ಕ್ಕೆ ಪೇಜರ್‌ಗಳು ಹೆಜ್ಬೊಲ್ಲಾ ನಾಯಕರ ಹೆಸರಿನಲ್ಲಿ ಸಂದೇಶ ಸ್ವೀಕರಿಸಲು ಪ್ರಾರಂಭಿಸಿತ್ತು. ಬಳಿಕ ಸ್ಫೋಟಗೊಂಡಿತ್ತು.

ಸ್ಫೋಟದ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿಲ್ಲ. ಆದರೆ ಹಿಜ್ಬೊಲ್ಲಾ ದೇಶವನ್ನು ದೂಷಿಸಿದ್ದಾರೆ.
ಇಸ್ರೇಲ್‌ನ ಮೊಸಾದ್ ಗೂಢಚಾರ ಸಂಸ್ಥೆ 5,000 ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ ಸ್ಫೋಟಕವನ್ನು ಅಳವಡಿಸಿದೆ ಎಂದು ಹಿರಿಯ ಲೆಬನಾನಿನ ಭದ್ರತಾ ಮೂಲ ಹೇಳಿದೆ.

ಗೋಲ್ಡ್ ಅಪೊಲೊ ತಯಾರಿಸಿದ ಪೇಜರ್‌ಗಳನ್ನು ಈ ವರ್ಷದ ಆರಂಭದಲ್ಲಿ ದೇಶಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಸ್ಫೋಟಗೊಂಡ ಪೇಜರ್‌ಗಳ ಪೈಕಿ ಬಹುತೇಕ ಮಾದರಿಯು AP924 ಮಾಡೆಲ್‌ ಎಂದು ಗುರುತಿಸಲಾಗಿದೆ.

ನಾಶವಾಗಿರುವ ಪೇಜರ್‌ಗಳಲ್ಲಿ ತೈವಾನ್ ಮೂಲದ ಪೇಜರ್ ತಯಾರಕರಾದ ಗೋಲ್ಡ್ ಅಪೊಲೊ ತಯಾರಿಸಿದ ಪೇಜರ್‌ಗಳಿಗೆ ಹೊಂದಿಕೆಯಾಗುವ ಸ್ವರೂಪ ಮತ್ತು ಸ್ಟಿಕ್ಕರ್‌ಗಳನ್ನು ಹೊಂದಿದೆ.

ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸ್ಫೋಟದ ಕಾರಣಗಳ ಬಗ್ಗೆ ತನಿಖೆ ನಡೆಸುತ್ತಿದೆ. ಇಸ್ರೇಲ್ ಗೆ ಸರಿಯಾದ ಶಿಕ್ಷೆಯನ್ನು ನೀಡುವುದಾಗಿ ಹೇಳಿದೆ.

ಸಾಧನಗಳ ಬ್ಯಾಟರಿಗಳು ಸ್ಫೋಟಗೊಂಡು ಈ ಸ್ಫೋಟ ಉಂಟಾಗಿರಬಹುದು ಎಂದು ಊಹಿಸಲಾಗಿದೆ.
ವರ್ಷದ ಆರಂಭದಲ್ಲಿ ಹೆಜ್ಬೊಲ್ಲಾದ ನಾಯಕ ಹಸನ್ ನಸ್ರಲ್ಲಾ ಅವರು ಸೆಲ್‌ಫೋನ್‌ಗಳ ಬಳಕೆಯನ್ನು ಬಳಸದಂತೆ ಎಚ್ಚರಿಕೆಯನ್ನು ನೀಡಿದ್ದರು.

Lebanon Pager Explosions: ಸ್ಮಾರ್ಟ್‌ಫೋನ್‌ ಕಾಲದಲ್ಲೂ ಹೆಜ್ಬೊಲ್ಲಾ ಉಗ್ರರು ಇನ್ನೂ ಪೇಜರ್‌ಗಳನ್ನೇ ಬಳಸುತ್ತಿರುವುದೇಕೆ?

ಈ ದಾಳಿಯಿಂದ ಹೆಜ್ಬೊಲ್ಲಾ ತತ್ತರಿಸಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮತ್ತು ಹೆಜ್ಬೊಲ್ಲಾ ಮಿತ್ರ ಹಮಾಸ್ ನಡುವಿನ ಗಾಜಾ ಸಂಘರ್ಷದಲ್ಲಿ ಉಂಟಾದ ಸ್ಫೋಟದ ಬಳಿಕ ಇದು “ದೊಡ್ಡ ಭದ್ರತಾ ಉಲ್ಲಂಘನೆ” ಎಂದು ಹೆಜ್ಬೊಲ್ಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ.