Monday, 16th September 2024

ಡೆಲ್ಟಾ ರೂಪಾಂತರ: ಸಿಡ್ನಿ, ಮೆಲ್ಬೋರ್ನ್’ನಲ್ಲಿ ಕಠಿಣ ಲಾಕ್‌ಡೌನ್‌

ಸಿಡ್ನಿ: ಸಿಡ್ನಿಯಲ್ಲಿ ಹೆಚ್ಚು ಸಾಂಕ್ರಾಮಿಕವಾದ ಕರೋನಾ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರಗಳು ಹಿನ್ನೆಲೆಯಲ್ಲಿ ರಾಜಧಾನಿ ಕ್ಯಾನ್‌ಬೆರಾ, ಸಿಡ್ನಿಯ

ನೈಋತ್ಯ ದಿಕ್ಕಿನಲ್ಲಿ 260 ಕಿಮೀ, ಒಂದು ವರ್ಷಕ್ಕಿಂತ ಹೆಚ್ಚು ಕಾಲದ ನಂತರ ಕೋವಿಡ್ -19 ಪ್ರಕರಣವನ್ನು ವರದಿಯಾದ ಹಿನ್ನೆಲೆ ಗುರುವಾರ ಸಂಜೆಯಿಂದ ಒಂದು ವಾರದ ಲಾಕ್‌ಡೌನ್ ಘೋಷಿಸಲಾಗಿದೆ.

ಆಸ್ಟ್ರೇಲಿಯಾದ ಎರಡು ದೊಡ್ಡ ನಗರಗಳಾದ ಸಿಡ್ನಿ ಮತ್ತು ಮೆಲ್ಬೋರ್ನ್ ಅನ್ನು ಕಠಿಣ ಲಾಕ್‌ ಡೌನ್‌ಗೆ ಈ ಡೆಲ್ಟಾ ರೂಪಾಂತರ ತಳ್ಳಿದೆ.

ನೆರೆಯ ವಿಕ್ಟೋರಿಯಾ ರಾಜ್ಯವು ಗುರುವಾರ 21 ಹೊಸ ಸ್ಥಳೀಯ ಕೋವಿಡ್‌ ಪ್ರಕರಣಗಳನ್ನು ವರದಿ ಮಾಡಿದೆ. ಒಂದು ದಿನದ ಮುಂಚೆ, ರಾಜ್ಯದ ರಾಜಧಾನಿ ಯಾದ ಮೆಲ್ಬೋರ್ನ್‌ನ 5 ಮಿಲಿಯನ್ ನಿವಾಸಿಗಳು ಎರಡನೇ ವಾರದ ಲಾಕ್‌ಡೌನ್ ಪ್ರವೇಶಿಸಲು ತಯಾರಿ ನಡೆಸಿದ್ದಾರೆ.

ಕೇವಲ 37,700 ಪ್ರಕರಣಗಳು ಮತ್ತು 946 ಸಾವುಗಳು ದಾಖಲಾಗಿದೆ ಮತ್ತು ಸಿಡ್ನಿ ಮತ್ತು ಮೆಲ್ಬೋರ್ನ್‌ನಲ್ಲಿ ಏಕಾಏಕಿ ಕೋವಿಡ್ ಹೆಚ್ಚಳ ಹೊರತಾಗಿಯೂ ಹಲವಾರು ರಾಜ್ಯಗಳು ಬಹುತೇಕ ಕೋವಿಡ್ ಮುಕ್ತವಾಗಿವೆ. ಆದರೆ ನ್ಯೂ ಸೌತ್ ವೇಲ್ಸ್‌ನಲ್ಲಿ ಡೆಲ್ಟಾ ರೂಪಾಂತರದ ತ್ವರಿತ ಹರಡುವಿಕೆ ಮತ್ತು ನಿಧಾನಗತಿಯ ಲಸಿಕೆ ಹೊರಹೊಮ್ಮುವಿಕೆಯು ದೇಶವನ್ನು ಹೊಸ ಕೋವಿಡ್‌ ಅಲೆಯ ಸೋಂಕುಗಳಿಗೆ ತುತ್ತಾಗುವಂತೆ ಮಾಡಿದೆ.

16 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು ಶೇ. 24 ಜನರಿಗೆ ಮಾತ್ರ ಸಂಪೂರ್ಣ ಕೋವಿಡ್‌ ಲಸಿಕೆ ಹಾಕಲಾಗಿದೆ ಮತ್ತು ಹೆಚ್ಚಿನ ಕೋವಿಡ್‌ ಲಸಿಕೆ ವ್ಯಾಪ್ತಿಯನ್ನು ತಲುಪುವವರೆಗೆ ಆಸ್ಟ್ರೇಲಿಯಾ ಸ್ಟಾಪ್-ಅಂಡ್-ಸ್ಟಾರ್ಟ್ ಲಾಕ್‌ಡೌನ್‌ಗಳನ್ನು ಮಾಡುತ್ತಿರುವುದನ್ನು ತಜ್ಞರು ಗಮನಿಸುತ್ತಿದ್ದಾರೆ.

Leave a Reply

Your email address will not be published. Required fields are marked *