ಬಲಪಂಥೀಯ ನಾಯಕ ಜೈರ್ ಬೋಲ್ಸನಾರೊ ಅವರ ವಿಭಜಿತ ಆಡಳಿತದ ನಂತರ ಬಡವರು ಮತ್ತು ಪರಿಸರಕ್ಕಾಗಿ ಹೋರಾ ಡಲು ಮತ್ತು ದೇಶವನ್ನು ಪುನರ್ ನಿರ್ಮಿಸಲು ಲುಲಾ ಡ ಸಿಲ್ವಾ ಪ್ರತಿಜ್ಞೆ ಮಾಡಿದರು.
ಬ್ರೆಜಿಲಿಯನ್ ಜನರೊಂದಿಗೆ ದೇಶವನ್ನು ಪುನರ್ನಿರ್ಮಿಸಲು ನಾನು ಪ್ರತಿಜ್ಞೆ ಮಾಡುತ್ತೇನೆ. ಬಡ ಬ್ರೆಜಿಲಿಯನ್ನರ ಜೀವನವನ್ನು ಸುಧಾರಿಸಲು, ಜನಾಂಗೀಯ ಮತ್ತು ಲಿಂಗ ಸಮಾ ನತೆಯ ಕಡೆಗೆ ಕೆಲಸ ಮಾಡಲು ಮತ್ತು ಅಮೆಜಾನ್ ಮಳೆಕಾಡಿನಲ್ಲಿ ಶೂನ್ಯ ಅರಣ್ಯನಾಶದ ಕಡೆ ಗಮನ ಹರಿಸುವುದಾಗಿ ಲುಲಾ ಡ ಸಿಲ್ವಾ ಪ್ರತಿಜ್ಞೆ ಮಾಡಿದರು.
ಫ್ಯಾಸಿಸಂನಿಂದ ಪ್ರೇರಿತ ವಿರೋಧಿಗಳ ಮುಖಾಂತರ ನಾವು ಸ್ವೀಕರಿಸಿದ ಜನಾದೇಶವನ್ನು ನಮ್ಮ ಪ್ರಜಾಪ್ರಭುತ್ವ ಸಂವಿಧಾನದ ಮೂಲಕ ರಕ್ಷಿಸಲಾಗುವುದು. ನಾವು ದ್ವೇಷಕ್ಕೆ ಪ್ರೀತಿ ಯಿಂದ ಪ್ರತಿಕ್ರಿಯಿಸುತ್ತೇವೆ. ಸತ್ಯದೊಂದಿಗೆ ಸುಳ್ಳು, ಭಯೋತ್ಪಾದನೆ ಮತ್ತು ಹಿಂಸಾಚಾರಕ್ಕೆ ಕಾನೂನಿನೊಂದಿಗೆ ಪ್ರತಿಕ್ರಿಯಿಸು ತ್ತೇವೆ ಎಂದು ಎಎಫ್ಪಿ ಲುಲಾ ಹೇಳಿದ್ದಾರೆ.
Read E-Paper click here