ಮಾಲೆ: ಮಾಲ್ಡೀವ್ಸ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷದ ಅಭ್ಯರ್ಥಿ ಮಹಮದ್ ಮುಯಿಝು ಶೇ. 53 ಕ್ಕೂ ಅಧಿಕ ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಹಾಲಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಶೇ.46 ಮತಗಳನ್ನು ಪಡೆದಿದ್ದು, ಕಡಿಮೆ ಅಂತರದಲ್ಲಿ ಸೊಲುಂಡಿದ್ದಾರೆ. ಮತ್ತು ಮುಯಿಝು 18,000 ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
ಇಂದಿನ ಫಲಿತಾಂಶದಿಂದ ದೇಶದ ಭವಿಷ್ಯವನ್ನು ಕಟ್ಟುವ ಅವಕಾಶ ಸಿಕ್ಕಿದೆ. ಮಾಲ್ಡೀ ವ್ಸ್‌ನ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುವ ಶಕ್ತಿ ದೊರಕಿದೆ ಎಂದು ಸಂತಸ ವ್ಯಕ್ತಪಡಿಸಿ ದರು. ಜತೆಗೆ ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡುವ ಸಮಯ ಬಂದಿದೆ. ನಾವು ಶಾಂತಿಯುತರಾಗಬೇಕು. ಸಮಾಜ ಶಾಂತಿಯಿಂದ ನೆಲಸಬೇಕು ಎಂದಿದ್ದಾರೆ. ಹಾಗೆ ಸೋಲಿಹ್ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರನ್ನು ಜೈಲಿನಿಂದ ಗೃಹಬಂಧನಕ್ಕೆ ವರ್ಗಾಯಿಸಬೇಕೆಂದು ಮುಯಿಝು ವಿನಂತಿಸಿದ್ದಾರೆ.
ಇಂಜಿನಿಯರ್ ಆಗಿರುವ ಮುಯಿಝು 7 ವರ್ಷಗಳ ಕಾಲ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಯ್ಕೆಯಾದಾಗ ರಾಜಧಾನಿಯಾದ ಮಾಲೆಯ ಮೇಯರ್ ಆಗಿದ್ದರು. ಹಾಗೆ ಇದೇ ಸೆಪ್ಟೆಂಬರ್ 9ರಂದು ಮೊದಲ ಸುತ್ತಿನ ಮತದಾನ ನಡೆದಿತ್ತು. ಅದರಲ್ಲಿ ಮಹಮದ್ ಮುಯಿಝು ಶೇ.46ರಷ್ಟು ಮತಗಳನ್ನು ಪಡೆದಿದ್ದರು.