ರೋಮ್: ಇಟಲಿ ದೇಶದ ನೂತನ ಪ್ರಧಾನಿಯಾಗಿ ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಅಧಿಕಾರ ಸ್ವೀಕರಿಸಿದರು.
ಇಟಲಿಯ ಪ್ರಧಾನಿಯಾಗಲು ಸಂಸತ್ತಿನ ಅತಿದೊಡ್ಡ ಗುಂಪಿನ ಹಾಗೂ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ವಾರ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಾರಿಯೋ ದ್ರಾಘಿ ನೇತೃತ್ವದಲ್ಲಿ ದೇಶದಲ್ಲಿ ಹಲವು ಅಭಿವೃದ್ಧಿ ನಡೆಯಲಿದೆ ಎಂದು ಪಕ್ಷದ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಇನ್ನೂ ಸಾಂಕ್ರಾಮಿಕ ರೋಗ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೊರೋನಾ ಸೋಂಕಿಗೆ ದೇಶದಲ್ಲಿ ಈವರೆಗೆ 90 ಸಾವಿರಕ್ಕಿಂರ ಅಧಿಕ ಜನರು ಮೃತಪಟ್ಟಿದ್ದಾರೆ.