ಬಾರ್ಸಿಲೋನಾ: ವಿಶ್ವದಲ್ಲಿಯೇ ಮೊದಲ ಬಾರಿಗೆ ಆಂಟಿವೈರಸ್ ಕಂಡುಹಿಡಿದು ವಿಶ್ವಖ್ಯಾತಿ ಗಳಿಸಿರುವ ಮ್ಯಾಕ್ ಅಫೀ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮ್ಯಾಕ್ ಅಫಿ (McAfee) ಎಂಬ ಆಯಂಟಿ ವೈರಸ್ ಕಂಪ್ಯೂಟರ್ ಬಳಕೆದಾರರಿಗೆ ತೀರಾ ಪರಿಚಿತ. ಈ ಆಯಂಟಿವೈರಸ್ ಕಂಡು ಹಿಡಿಯುವ ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು. 1987ರಲ್ಲಿ ಇದನ್ನು ಕಂಡುಹಿಡಿದಿದ್ದು ವಿಶ್ವದ ಮೊದಲ ಆಯಂಟಿ ವೈರಸ್ ಎಂದು ಎನಿಸಿಕೊಂಡಿದ್ದರು. ಈ ಮೂಲಕ ಐಟಿ ಕ್ಷೇತ್ರದಲ್ಲಿ ಭಾರಿ ಹೆಸರು ಮಾಡಿದ್ದ ಮ್ಯಾಕ್ ಅವರು ದುರಂತ ಸಾವು ಕಂಡಿದ್ದಾರೆ.
ಇವರ ಮೇಲೆ ತೆರಿಗೆ ವಂಚನೆ ಆರೋಪ ಹೊರಿಸಲಾಗಿತ್ತು. ಇವರನ್ನು ಬಂಧಿಸಿ 2020ರ ಅಕ್ಟೋಬರ್ 3ರಂದು ಜೈಲಿಗೆ ಅಟ್ಟಲಾ ಗಿತ್ತು. ಖಿನ್ನತೆಯಿಂದಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ವಕೀಲ ಜೇವಿಯರ್ ಹೇಳಿದ್ದಾರೆ. ವಿಶ್ವದ ಮೊದಲ ವಾಣಿಜ್ಯ ಆಯಂಟಿವೈರಸ್ ಎಂದು ಎನಿಸಿಕೊಂಡಿದ್ದ ಮ್ಯಾಕ್ ಅಫೀ ಕಂಪೆನಿಯನ್ನು 2011ರಲ್ಲಿ ಇಂಟೆಲ್ಗೆ ಮಾರಲಾಗಿತ್ತು.