ಈ ನಡುವೆ ಯುಎಸ್ನಲ್ಲಿರುವ ತನ್ನ ಎಲ್ಲ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ ಎಂದು ವರದಿ ಯಾಗಿದೆ. ಹಾಗೆಯೇ ಸಂಸ್ಥೆಯಲ್ಲಿ ಉದ್ಯೋಗ ಕಡಿತ ನಡೆಸಲು ಕೂಡಾ ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೆಕ್ಡೊನಾಲ್ಡ್ಸ್ ಸಂಸ್ಥೆಯು ಯುಎಸ್ನಲ್ಲಿ ಎಲ್ಲ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಹಾಗೆಯೇ ಹೊಸದಾಗಿ ಉದ್ಯೋಗ ಕಡಿತವನ್ನು ಮಾಡಲು, ಈ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಲು ತಯಾರಿ ನಡೆಸಿದೆ. ಸಂಸ್ಥೆಯು ಕಳೆದ ವಾರ ತನ್ನ ಯುಎಸ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ಮಾಹಿತಿ ನೀಡಿದೆ. ಉದ್ಯೋಗಿಗಳು ಸೋಮವಾರದಿಂದ ಬುಧವಾರದವರೆಗೆ ವರ್ಕ್ ಫ್ರಮ್ ಹೋಮ್ ಮಾಡಬೇಕು ಎಂದು ಕಳೆದ ವಾರ ತಿಳಿಸಿದೆ.
ಉದ್ಯೋಗ ಕಡಿತ ಪ್ರಕ್ರಿಯೆಯನ್ನು ವರ್ಚುವಲ್ ಆಗಿ ತಿಳಿಸುವ ಉದ್ದೇಶದಿಂದ ಮೆಕ್ಡೊನಾಲ್ಡ್ಸ್ ಯುಎಸ್ನಲ್ಲಿನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ತಿಳಿಸಿದೆ ಎಂದು ವರದಿ ಹೇಳಿದೆ.
ಗೂಗಲ್, ಅಮೆಜಾನ್, ಮೆಟಾ (ಫೇಸ್ಬುಕ್) ಸೇರಿದಂತೆ ಹಲವಾರು ಸಂಸ್ಥೆಗಳು ಈಗಾಗಲೇ ಉದ್ಯೋಗ ಕಡಿತವನ್ನು ಮಾಡಿದೆ.