Friday, 22nd November 2024

ಭಾರತದ ತೊರೆದಿದ್ದ ಮೆಹುಲ್ ಚೋಕ್ಸಿ ಅಂಟಿಗಾದಲ್ಲೂ ನಾಪತ್ತೆ

ಆಂಟಿಗಾ: ಭಾರತ ತೊರೆದು ಅಂಟಿಗಾ ದ್ವೀಪ ರಾಷ್ಟ್ರದಲ್ಲಿ ನೆಲೆ ಕಂಡುಕೊಂಡಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ವಜ್ರ ವ್ಯಾಪಾರಿ, ಗೀತಾಂಜಲಿ ಸಮೂಹದ ಮೆಹುಲ್ ಚೋಕ್ಸಿ ನಾಪತ್ತೆಯಾಗಿದ್ದಾರೆ. ಉದ್ಯಮಿ ಈಗ ಅಲ್ಲಿಂದಲೂ ಕಾಲ್ಕಿತ್ತಿದ್ದಾನೆ ಎಂಬ ವರದಿ ಬಂದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 13,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಜತೆಗೆ ಚೊಕ್ಸಿ ಆರೋಪಿಯಾಗಿದ್ದು, ಕೆರಿಬಿಯನ್ ದ್ವೀಪ ರಾಷ್ಟ್ರ ಆಂಟಿಗಾ ಹಾಗೂ ಬರ್ಬುಡಾದಲ್ಲಿ 2017ರಿಂದಲೇ ಪೌರತ್ವ ಪಡೆದುಕೊಂಡಿದ್ದಾರೆ.

ಭಾನುವಾರದಿಂದ ಚೋಕ್ಸಿಗಾಗಿ ತೀವ್ರ ಹುಡುಕಾಟ ಜಾರಿಯಲ್ಲಿದೆ. ಈ ಸುದ್ದಿಯನ್ನು ಪೊಲೀಸ್ ಆಯುಕ್ತ ಅಟ್ಲಿ ರೊಡ್ನಿ ಖಚಿತ ಪಡಿಸಿದ್ದಾರೆ. ಚೋಕ್ಸಿ ಅವರು ಒಟ್ಟಾರೆ 70, 000 ಕೋಟಿ ರುಗೂ ಅಧಿಕ ಸಾಲ ಹೊಂದಿದ್ದು, ಅತಿದೊಡ್ಡ ಸಾಲಗಾರ ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿದ್ದಾರೆ ಎಂದು ಆರ್‌ಬಿಐ ಹೇಳಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಭಾರತದ ಪೌರತ್ವವನ್ನು ತೊರೆದಿದ್ದಾರೆ. ರಾಯಭಾರ ಕಚೇರಿಗೆ ಭಾರತದ ಪಾಸ್ ಪೋರ್ಟ್ ನೀಡಿದ್ದಾರೆ. ಜೊತೆಗೆ ಜಾಲಿ ಹಾರ್ಬರ್ ಮಾರ್ಕ್ಸ್ ನಲ್ಲಿ ವಾಸವಾಗಿದ್ದೇನೆ ಎಂದು ಹೊಸ ವಿಳಾಸವನ್ನು ನೀಡಿದ್ದಾರೆ.

ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಸಿಬಿಐ ತಂಡಗಳು, ಚೋಕ್ಸಿ ವಿರುದ್ಧ ದೋಷರೋಪಣ ಪಟ್ಟಿ ಸಲ್ಲಿಸಿದೆ. ಆದರೆ, ಆರ್ಥಿಕ ಅಪರಾಧಿಗಳ ಹಸ್ತಾಂತರಕ್ಕಾಗಿ ಯಾವುದೇ ಒಪ್ಪಂದವನ್ನು ಆಂಟಿಗುವಾ ಹಾಗೂ ಭಾರತ ಹೊಂದಿಲ್ಲ.