ಮಹಿಳೆಯರು ಪ್ರಪಂಚದಲ್ಲಿ ಎಲ್ಲೂ ಸುರಕ್ಷಿತವಾಗಿಲ್ಲ (Women Safety) ಎಂದು ಆತಂಕ ವ್ಯಕ್ತಪಡಿಸುತ್ತೇವೆ. ಆದರೆ ಇಲ್ಲೊಂದು ದೇಶದಲ್ಲಿ ಪುರುಷರಿಗೆ ಸುರಕ್ಷತೆ ಇಲ್ಲ (Male Harassment). ಯಾಕೆಂದರೆ ಇಲ್ಲಿ ಪುರುಷರ ಮೇಲೆ ಮಹಿಳೆಯರೇ ಲೈಂಗಿಕ ದೌರ್ಜನ್ಯ (Sexual assault) ಎಸಗುತ್ತಾರೆ. ಪುರುಷರ ಮೇಲೆ ಅತ್ಯಾಚಾರ ಮಾಡುವ ಘಟನೆಗಳು ಆ ದೇಶದಲ್ಲಿ ಸಾಮಾನ್ಯವಾಗಿದೆ.
ಭಾರತದಲ್ಲಿ ಪ್ರತಿದಿನ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಪ್ರತಿ 20 ನಿಮಿಷಕೊಬ್ಬಳು ಹುಡುಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಅಂದರೆ ಪ್ರತಿದಿನ 87 ಮಹಿಳೆಯರು ಅತ್ಯಾಚಾರಕ್ಕೆ ಬಲಿಯಾಗುತ್ತಾರೆ. ಇದನ್ನು ತಡೆಗಟ್ಟು ಸಲುವಾಗಿ ಕಾನೂನನ್ನು ಸಾಕಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರೂ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ.
ಆದರೆ ವಿಶ್ವದ ಈ ಒಂದು ದೇಶದಲ್ಲಿ ಮಾತ್ರ ಪುರುಷರ ಮೇಲೆ ಮಹಿಳೆಯರೇ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಇಂತಹ ಘಟನೆಗಳು ಅಲ್ಲಿ ಸಾಮಾನ್ಯ. ಈ ದೇಶದ ಮುಸ್ಲಿಂ ಮಹಿಳೆಯು ಯಾವುದೇ ಪುರುಷನನ್ನು ಇಷ್ಟಪಟ್ಟರೆ ಅವಳು ಬಲವಂತವಾಗಿ ಅವನೊಂದಿಗೆ ಲೈಂಗಿಕ ಸಂಬಂಧ ಹೊಂದಲೇಬೇಕು.
ನಂಬಿಕೆ
ಆಫ್ರಿಕನ್ ದೇಶವಾದ ನೈಜರ್‌ನಲ್ಲಿ ಮುಸ್ಲಿಂ ಸಮುದಾಯದ ಭಾಗವಾಗಿರುವ ಟುವಾರೆಗ್ ಬುಡಕಟ್ಟು ಜನಾಂಗ ಸಹಾರಾ ಮರುಭೂಮಿಯಲ್ಲಿ ವಾಸಿಸುತ್ತಿದೆ. ಈ ಬುಡಕಟ್ಟಿನ ಮುಸ್ಲಿಂ ಮಹಿಳೆಯರಿಗೆ ಯಾವುದೇ ಪುರುಷನೊಂದಿಗೆ ಬಲವಂತದ ದೈಹಿಕ ಸಂಬಂಧಗಳನ್ನು ನಡೆಸುವ ಸ್ವಾತಂತ್ರ್ಯವಿದೆ. ಅವರಿಗೆ ಹಾಗೆ ಮಾಡಲು ಅನುಮತಿ ನೀಡಲಾಗಿದೆ. ಮದುವೆಯ ಮೊದಲು ಯಾವುದೇ ಪುರುಷನ ಮೇಲಾದರೂ ಮಹಿಳೆ ಅತ್ಯಾಚಾರ ಮಾಡಬಹುದು. ಯಾಕೆಂದರೆ ಇದು ಅವರ ನಂಬಿಕೆಯ ಭಾಗವಾಗಿದೆ.
ಪುರುಷರಿಗೆ ಬುರ್ಖಾ
ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಬುರ್ಖಾ ಧರಿಸುತ್ತಾರೆ. ಆದರೆ ಇಲ್ಲಿ ಮಾತ್ರ ಪುರುಷರು ಬುರ್ಖಾ ಧರಿಸುತ್ತಾರೆ. ಈ ಬುಡಕಟ್ಟಿನ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸದಿರುವಷ್ಟು ಸ್ವಾತಂತ್ರ್ಯವನ್ನು ಹೊಂದಿದ್ದಾರೆ.
2011 ವರದಿಯ ಪ್ರಕಾರ ಅಲ್ಲಿನ ಜನಸಂಖ್ಯೆಯು ಸುಮಾರು 2 ಮಿಲಿಯನ್ ಆಗಿತ್ತು. ಅವರು ಇಸ್ಲಾಮಿಕ್ ಪದ್ಧತಿಗಳಿಂದ ಭಿನ್ನವಾದ ಜೀವನವನ್ನು ನಡೆಸುತ್ತಾರೆ. ಇಲ್ಲಿ ಪುರುಷರು ಬುರ್ಖಾಗಳನ್ನು ಧರಿಸುತ್ತಾರೆ ಮತ್ತು ಮಹಿಳೆಯರು ತೆರೆದುಕೊಳ್ಳುತ್ತಾರೆ. ಸ್ತ್ರೀಯರಿಗೆ ತಾವಾಗಿಯೇ ಗಂಡನಿಗೆ ವಿಚ್ಛೇದನ ನೀಡುವ ಹಕ್ಕಿದೆ.
Murder Case: ಮೋಸದ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಯುವತಿ; ಏನಾಯಿತು ಆಕೆಗೆ?
ನಿಕಟ ಸಂಬಂಧಗಳನ್ನು ನಡೆಸುವಾಗ ಅವರು ಕತ್ತಲೆಯಲ್ಲಿ ಟೆಂಟ್ ಅನ್ನು ಪ್ರವೇಶಿಸಲು ಮತ್ತು ಸೂರ್ಯೋದಯಕ್ಕೆ ಮುಂಚಿತವಾಗಿ ಹೊರಬರಬೇಕು ಎನ್ನುವ ನಿಯಮವಿದೆ.