Friday, 27th September 2024

ಮೆಟಾದಿಂದ 11 ಸಾವಿರ ಉದ್ಯೋಗಿಗಳ ವಜಾ

ನ್ಯೂಯಾರ್ಕ್‌: ಮೆಟಾ ಈ ವರ್ಷವೂ ಉದ್ಯೋಗ ಕಡಿತವನ್ನು ಮುಂದುವರಿಸಿದೆ.

ಫೇಸ್‌ಬುಕ್‌ನ ಪೋಷಕ ಸಂಸ್ಥೆ ಮೆಟಾ ಮತ್ತೊಮ್ಮೆ ಉದ್ಯೋಗ ಕಡಿತ ಘೋಷಣೆ ಮಾಡಿದೆ. ಸಂಸ್ಥೆಯಲ್ಲಿ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಮೆಟಾ ಘೋಷಣೆ ಮಾಡಿದೆ.

ಇದು ಭಾರತದಲ್ಲಿಯೂ ಸಾವಿರಾರು ಮೆಟಾ ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ.

ಪ್ರಮುಖ ಅಧಿಕಾರಿಗಳು, ವಕೀಲರು, ಹಣಕಾಸು ತಜ್ಞರು, ಮಾನವೀಯ ಸಂಪನ್ಮೂಲ ವ್ಯವಹಾರದ ರಚನೆಯನ್ನು ಸರಿದೂಗಿ ಸಲು ತಂತ್ರಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ವನ್ನು ವಹಿಸಲಾಗಿದೆ ಎಂದು ವರದಿ ಹೇಳಿದೆ. ಕೆಲವು ಪ್ರಮುಖ ಸ್ಥಾನಗಳಿಗೆ ಕೆಲವು ಉದ್ಯೋಗಿಗಳನ್ನು ಪ್ರೋಮೋಷನ್ ಮಾಡುವ ಸಾಧ್ಯತೆಯಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲಾಕ್‌ಡೌನ್ ಆದಾಗ ಜಾಗತಿಕವಾಗಿ ಜನರು ಮನೆಯಲ್ಲಿಯೇ ಬಾಕಿಯಾಗಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾಗಿತ್ತು. ಇದನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಫೇಸ್‌ಬುಕ್‌ನ ಪೋಷಕ ಸಂಸ್ಥೆ ಮೆಟಾ ಸಾವಿರಾರು ಉದ್ಯೋಗಿಗಳನ್ನು ನೇಮಕಾತಿ ಮಾಡಿತ್ತು.

ಇದರಿಂದಾಗಿ 2022ರಲ್ಲಿ ಮೆಟಾ ಸಂಸ್ಥೆಯು ಭಾರೀ ಸಂಕಷ್ಟವನ್ನು ಅನುಭವಿಸಿದೆ.