Sunday, 15th December 2024

ಕೋವಿಡ್‌ ಹಾಟ್‌ಸ್ಪಾಟ್‌ಗಳಾದ ಮಿಷಿಗನ್‌, ಮಿನ್ನೆಸೋಟಾ

ಮಿಷಿಗನ್‌: ಅಮೆರಿಕದ ಮಿಷಿಗನ್‌ ಮತ್ತು ಮಿನ್ನೆಸೋಟಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದು, ಕರೋನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾ ಗುತ್ತಿವೆ. ಒಂದೇ ವಾರದಲ್ಲಿ ಮಿಷಿಗನ್‌ ಆಸ್ಪತ್ರೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ.

ಅಮೆರಿಕದಲ್ಲಿನ ಈ ಎರಡೂ ರಾಜ್ಯಗಳು ಕೋವಿಡ್‌ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಯಾಗಿವೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ’ ಎಂದು ‘ಡೆಟ್ರಾ ಯಿಟ್‌ನ ಹೆನ್ರಿ ಫೋರ್ಡ್ ಹೆಲ್ತ್ ಸಿಸ್ಟಮ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದಾರೆ.

ದೇಶದ ದಕ್ಷಿಣ ಭಾಗದಲ್ಲಿ ಸೋಂಕು ದೃಢ ಪ್ರಮಾಣವೂ ಕಡಿಮೆಯಾಗಿದ್ದು, ಮಾಸ್ಕ್‌ ಹಾಕಿಕೊಳ್ಳುವ ನಿರ್ಬಂಧಗಳನ್ನು ಕೆಲವೆಡೆ ತೆರವು ಮಾಡಲಾಗಿದೆ. ಆದರೆ ಈಶಾನ್ಯ ಮತ್ತು ಮಧ್ಯ ಪಶ್ಚಿಮ ಭಾಗದ ಮೇಲ್ಭಾಗದಲ್ಲಿ ಸೋಂಕು ತೀವ್ರವಾಗುತ್ತಿದೆ.