ವಾಷಿಂಗ್ಟನ್: ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್ ಭಾರತದಲ್ಲಿ ಕೆಲವು ಕಾಲ ಡೌನ್ ಆಗಿತ್ತು.
ಟೀಮ್ಸ್ ಸರ್ವರ್ ಡೌನ್ ಆಗಿರುವ ಬಗ್ಗೆ ಡೌನ್ಡಿಟೆಕ್ಟರ್ ಸುಮಾರು 3,500ರಷ್ಟು ಮಂದಿ ವರದಿ ಮಾಡಿದ್ದರು. ಲಿಂಕ್ಡ್ಇನ್ ಸರ್ವರ್ ಕೂಡ ಡೌನ್ ಆಗಿತ್ತು.
ಈ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಗಳು ಭಾರಿ ಖುಷಿಯಲ್ಲಿ ಕೆಲವು ಕ್ಷಣ ಕಳೆದಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲವು ನಿಮಿಷಗಳ ಆನಂದವನ್ನು ಇವರು ಆಚರಿಸುತ್ತಿದ್ದು, ಅದೀಗ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ತನಿಖೆಗೆ ಆದೇಶಿಸಿದೆ.
ಸೆಲೆಬ್ರೇಷನ್ ಮಾಡಿ ವೈರಲ್ ಆಗಿರುವುದು ಸಿಬ್ಬಂದಿಯ ಆತಂಕಕ್ಕೂ ಕಾರಣವಾಗಿದೆ. ಈ ಆನಂದದ ಕ್ಷಣಗಳು ವಿವಿಧ ರೀತಿಯ ಮೀಮ್ಸ್ಗಳೊಂದಿಗೆ ವೈರಲ್ ಆಗುತ್ತಿದೆ.
ಭಾರತ ಸೇರಿದಂತೆ ಜಾಗತಿಕವಾಗಿ 2023 ರಲ್ಲಿ ದಿನಕ್ಕೆ ಸರಾಸರಿ 1,600 ಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಶೇರ್‌ಚಾಟ್, ಓಲಾ, ಸ್ಕಿಟ್.ಐ, ಡಂಜೊ ಸೇರಿದಂತೆ ಹಲವು ಕಂಪೆನಿಗಳು ಇವುಗಳಲ್ಲಿ ಸೇರಿದೆ.