Friday, 20th September 2024

2+2 ಸಚಿವರ ಸಂವಾದದಲ್ಲಿ ಪಾಲ್ಗೊಂಡ ರಾಜನಾಥ್ ಸಿಂಗ್, ಎಸ್ ಜೈಶಂಕರ್

ವಾಷಿಂಗ್ಟನ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸೋಮ ವಾರ ವಾಷಿಂಗ್ಟನ್‌ನಲ್ಲಿ ಭಾರತ-ಯುಎಸ್ 2+2 ಸಚಿವರ ಸಂವಾದದಲ್ಲಿ ಪಾಲ್ಗೊಳ್ಳಲು ಯುಎಸ್ ರಾಜಧಾನಿಗೆ ಆಗಮಿಸಿದರು.

ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿರುವ ನಡುವೆ 2+2 ಸಭೆಗಾಗಿ ಭಾರತ ಹಾಗೂ ಅಮೆರಿಕ ಸರ್ಕಾರಗಳು ಈ ದ್ವಿಪಕ್ಷೀಯ ಸಭೆ ನಡೆಸುತ್ತಿದೆ. ಈ ಸಭೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೈಸರ್ಗಿಕ ಮಿತ್ರರು ಎಂದು ಬಣ್ಣಿಸಿ ದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮ ವಾರ ವರ್ಚುವಲ್ ಆಗಿ ಭೇಟಿಯಾಗ ಲಿದ್ದಾರೆ. ಬೈಡನ್ ಆಡಳಿತದ ಅಡಿಯಲ್ಲಿ ಇದು ಮೊದಲ ಭಾರತ-ಯುಎಸ್ 2 + 2 ಸಂವಾದ ಎಂದು ಶ್ವೇತಭವನ ತಿಳಿಸಿದೆ.

ಭಾರತೀಯ ಸಚಿವರುಗಳಾದ ಎಸ್ ಜೈಶಂಕರ್ ಹಾಗೂ ರಾಜನಾಥ್ ಸಿಂಗ್ ಅವರು, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಜೊತೆ ವೈಟ್ ಹೌಸ್‌ನಿಂದ ವರ್ಚುವಲ್ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಸ್ವಾಗತ ಮಾಡಲಿದ್ದಾರೆ.