Thursday, 21st November 2024

Modi Brazil Visit: ಗಮನ ಸೆಳೆದ ರಾಮಾಯಣ ನೃತ್ಯ ರೂಪಕ; ಬ್ರೆಜಿಲಿಯನ್ ಪ್ರಜೆಗಳ ಅದ್ಬುತ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಫುಲ್‌ ಫಿದಾ!

Modi Brazil Visit

ಬ್ರೆಜಿಲ್ : ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಬ್ರೆಜಿಲ್‌ ಪ್ರವಾಸವನ್ನು(Modi Brazil Visit) ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ನಿನ್ನೆ ಬ್ರೆಜಿಲ್‌ನಲ್ಲಿ G20 ಶೃಂಗಸಭೆಯಲ್ಲಿ(G20 Summit) ಭಾಗಿಯಾದ ನಂತರ ಅಲ್ಲಿ ಆಯೋಜನೆಗೊಂಡಿದ್ದ ರಾಮಾಯಣದ ನೃತ್ಯ ರೂಪಕವನ್ನು ಪ್ರಧಾನಿ ಮೋದಿ ವೀಕ್ಷಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ಶೇರ್‌ ಆಗುತ್ತಿದೆ.

ಬ್ರೆಜಿಲ್‌ನ ವಿಶ್ವವಿದ್ಯಾ ಸಂಸ್ಥೆಯ ಸದಸ್ಯರು ಈ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಕೃತ ಭಾಷೆಯ ರಾಮಾಯಣದ ನೃತ್ಯ ರೂಪಕ ಪ್ರದರ್ಶನ ನಡೆಯಿತು. ಈ ನೃತ್ಯ ರೂಪಕವನ್ನು ವೀಕ್ಷಿಸಿದ ಪ್ರಧಾನಿ ಮೋದಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಣಬೀರ್ ಜೈಸ್ವಾಲ್ ಟ್ವೀಟ್ ಮಾಡಿದ್ದು, ಬ್ರೆಜಿಲ್ ನ ವಿಶ್ವವಿದ್ಯಾ ಸಂಸ್ಥೆಯ ಸದಸ್ಯರು ಸಂಸ್ಕೃತ ಭಾಷೆಯ ರಾಮಾಯಣದ ನೃತ್ಯ ರೂಪಕ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಪ್ರಧಾನಿ ಮೋದಿಯನ್ನ ಭಾರತೀಯ ಪಾರಂಪರಿಕ ಶೈಲಿಯಲ್ಲಿ ಸ್ವಾಗತಿಸಿದರು ಎಂದು ಬಣ್ಣಿಸಿದ್ದಾರೆ.

ಬ್ರೆಜಿಲ್‌ನಲ್ಲಿರುವ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಿತ್ತು. ಜಿಲ್ ನ ವೇದ ವಿದ್ವಾಂಸರು ಪ್ರಧಾನಮಂತ್ರಿ ಮೋದಿಯವರ ಮುಂದೆ ವೇದ ಮಂತ್ರಗಳನ್ನು ಪಠಿಸಿದ್ದು ವಿಶೇಷವಾಗಿತ್ತು. ಅವರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿನ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ. ಅನಿವಾಸಿ ಭಾರತೀಯರು ‘ಮೋದಿ ಮೋದಿ’ ಘೋಷಣೆಗಳನ್ನು ಕೂಗುತ್ತಾ ಭಾರತೀಯ ಸಂಸ್ಕೃತಿಯಂತೆ ನೃತ್ಯ ಮೂಲಕ ಸ್ವಾಗತಿಸಿದರು.

ಈ ಸುದ್ದಿಯನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ನೈಜೀರಿಯಾದ 2ನೇ ಅತ್ಯುನ್ನತ ನಾಗರಿಕ ಗೌರವ ಪ್ರದಾನ