Thursday, 19th September 2024

ಬಿಬಿಸಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಾಯಿ ನಿಂದನೆ

ಲಂಡನ್‌: ಬಿಬಿಸಿ ಏಷ್ಯನ್ ನೆಟ್ ವರ್ಕ್ ನ ‘ಬಿಗ್ ಡಿಬೇಟ್’ ರೇಡಿಯೋ ಕಾರ್ಯಕ್ರಮದ ಎಪಿಸೋಡ್ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದೆ.

ಕಾರಣ, ಶೋನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಯುಕೆಯಲ್ಲಿ ಸಿಖ್ಖರು ಮತ್ತು ಭಾರತೀಯರ ವಿರುದ್ಧದ ವರ್ಣಭೇದ ನೀತಿಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ, ಸರ್ಕಾರವು ಅಂಗೀಕರಿಸಿದ ಮೂರು ಕೃಷಿ ಸುಧಾರಣೆಗಳ ನಂತರ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಚರ್ಚೆ ರೆಡಿಯೋದಲ್ಲಿ ನಡೆಯಿತು.

ಕಾರ್ಯಕ್ರಮದ ಸಂದರ್ಭದಲ್ಲಿ, ಕರೆ ಮಾಡಿದವರಲ್ಲಿ ಒಬ್ಬರು ಪಿಎಂ ಮೋದಿಯ ತಾಯಿ ಹೀರಾಬೆನ್ ಮೋದಿ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಮಾತನಾಡಿದ್ದಾರೆ.

Leave a Reply

Your email address will not be published. Required fields are marked *