Friday, 22nd November 2024

ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಜೂನ್‌ನಲ್ಲಿ ಅಮೆರಿಕ ಭೇಟಿ ಕೈಗೊಳ್ಳಲಿದ್ದಾರೆ.

ಜೂ.22ರಂದು ಬೈಡೆನ್‌ರ ಔತಣದಲ್ಲಿ ಭಾಗಿಯಾಗಲಿದ್ದಾರೆ. ಇದು ಬೈಡನ್‌ ಆಹ್ವಾನದ ಮೇರೆಗೆ ಮೋದಿ ನೀಡುತ್ತಿರುವ ಮೊದಲ ಅಮೆರಿಕ ಭೇಟಿಯಾಗಿದೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೈನ್‌ ಜೀನ್‌, ಪ್ರಧಾನಿ ಮೋದಿ ಅವರ ಮುಂಬರುವ ಭೇಟಿಯು ಅಮೆರಿಕ ಮತ್ತು ಭಾರತದ ನಡುವಣ ಆಳ ಮತ್ತು ಆಪ್ತ ಸಂಬಂಧ ಹಾಗೂ ಭಾರತ ಮತ್ತು ಅಮೆರಿಕರನ್ನರ ನಡುವಣ ನಂಟಾಗಿರುವ ಕುಟುಂಬ ಮತ್ತು ಸ್ನೇಹ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸಲಿದೆ. ಪ್ರಧಾನಿ ಮೋದಿ ಅವರ ಭೇಟಿಯು ಮುಕ್ತ, ಸಂಪದ್ಭರಿತ ಮತ್ತು ಇಂಡೋ ಪೆಸಿಫಿಕ್‌ ವಲಯದ ಕುರಿತ ಉಭಯ ದೇಶಗಳ ಬಾಧ್ಯತೆ ಯನ್ನು ಇನ್ನಷ್ಟುಬಲಪಡಿಸಲಿದೆ. ಜೊತೆಗೆ ಭೇಟಿಯೂ ರಕ್ಷಣೆ, ಸ್ವಚ್ಛ ಇಂಧನ ಮತ್ತು ಬಾಹ್ಯಾಕಾಶ ವಲಯದಲ್ಲಿನ ದ್ವಿಪಕ್ಷೀಯ ವ್ಯೂಹಾತ್ಮಕ ತಂತ್ರಜ್ಞಾನ ಪಾಲುದಾರಿಕೆ ಯನ್ನು ಇನ್ನಷ್ಟು ವಿಸ್ತರಿಸಲಿದೆ’ ಎಂದಿದ್ದಾರೆ.

ಜೊತೆಗೆ ‘ಉಭಯ ನಾಯಕರು ನಮ್ಮಗಳ ನಡುವಣ ಶೈಕ್ಷಣಿಕ ವಿನಿಮಯ, ವ್ಯಕ್ತಿ-ವ್ಯಕ್ತಿ ಸಂಬಂಧ, ಸಮಾನ ಸವಾಲುಗಳಾದ ಹವಾಮಾನ ಬದಲಾವಣೆ, ಆರೋಗ್ಯ ವಲಯದಲ್ಲಿನ ವೃತ್ತಿಪರರ ಕೌಶಲ್ಯ ಅಭಿವೃದ್ಧಿ ಬಗ್ಗೆಯೂ ಚರ್ಚಿಸಲಿದ್ದಾರೆ. ಜೊತೆಗೆ ಜೂನ್‌ 22ರಂದು ಅಧ್ಯಕ್ಷ ಬೈಡೆನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಔತಣ ಆಯೋಜಿಸಿದ್ದಾರೆ’ ಎಂದು ಜೀನ್‌ ಮಾಹಿತಿ ನೀಡಿದ್ದಾರೆ.