ನಾನು ಭಾರತ-ಯುಎಸ್‌ಎ ಸ್ನೇಹಕ್ಕೆ ಆವೇಗವನ್ನು ಸೇರಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳು ಮತ್ತು ಸಂವಾದಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಮುಂದಿನ ಪೀಳಿಗೆಗೆ ನಮ್ಮ ಗ್ರಹವನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನಮ್ಮ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುತ್ತವೆʼ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ತಮ್ಮ ಅಮೇರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯಕ್ರಮ ಗಳಲ್ಲಿ ಪಾಲ್ಗೊಂಡರು ಮತ್ತು ಭಾರತೀಯ ಮತ್ತು ಅಮೆರಿಕದ ಪ್ರಮುಖ ಸಿಇಒಗಳನ್ನು ಭೇಟಿ ಮಾಡಿದರು. ಅವರು ಆಗಮಿಸಿದ ನಂತರ ಶ್ವೇತಭವನದಲ್ಲಿ ವಿಧ್ಯುಕ್ತ ಸ್ವಾಗತ ಮತ್ತು ಗೌರವ ರಕ್ಷೆಯನ್ನು ಸ್ವೀಕರಿಸಿದರು.
ಈಜಿಪ್ಟ್‌ಗೆ ಆಗಮಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ನಾಯಕರು ಮತ್ತು ಭಾರತೀಯ ವಲಸಿಗರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇನ್ನೂ, 16 ನೇ ಫಾತಿಮಿದ್ ಖಲೀಫ್ ಅಲ್-ಹಕೀಮ್ ಬಿ-ಅಮ್ರ್ ಅಲ್ಲಾ (985-1021) ಅವರ ಹೆಸರಿನ ಕೈರೋದಲ್ಲಿನ ಐತಿಹಾಸಿಕ ಮತ್ತು ಪ್ರಮುಖ ಮಸೀದಿಯಾದ ಅಲ್-ಹಕೀಮ್ ಮಸೀದಿಯಲ್ಲಿ ಪ್ರಧಾನಿ ಸುಮಾರು ಅರ್ಧ ಗಂಟೆ ಕಳೆಯಲಿದ್ದಾರೆ.
ಅಲ್-ಹಕೀಮ್ ಬೈ-ಅಮ್ರ್ ಅಲ್ಲಾ ಮಸೀದಿಯು ಕೈರೋದಲ್ಲಿರುವ ದಾವೂದಿ ಬೋಹ್ರಾ ಸಮುದಾಯದ ಪ್ರಮುಖ ಸಾಂಸ್ಕೃತಿಕ ತಾಣವಾಗಿದೆ.