ಪಾಕಿಸ್ತಾನ: ಪಾಕಿಸ್ತಾನದ ನ್ಯಾಯಾಲಯವು ಅಲ್ಲಿನ ಜನಪ್ರಿಯ ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಆದೇಶಿಸಿದೆ. ಈ ತೀರ್ಪು ಪ್ರಕಟವಾದ ಕೂಡಲೇ ಸಿಬ್ಬಂದಿ ನೋವಿನಿಂದ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮರ್ಗಲ್ಲಾ ಹಿಲ್ಸ್ ರಾಷ್ಟ್ರೀಯ ಉದ್ಯಾನವನದೊಳಗೆ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ನಿರ್ಮಾಣದ ಆರೋಪದ ಕಾರಣದಿಂದ ಈ ಪ್ರದೇಶದಲ್ಲಿ ಮೋನಾಲ್ ಮತ್ತು ಇತರ ಹಲವಾರು ತಿನಿಸುಗಳನ್ನು ಮುಚ್ಚಲು ನ್ಯಾಯಾಲಯವು ಕಾನೂನು ನೋಟಿಸ್ ಜಾರಿ ಮಾಡಿದೆ ಎಂದು ವರದಿ ಯಾಗಿದೆ.
ಇಸ್ಲಾಮಾಬಾದ್ನಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್ ‘ಮೋನಾಲ್’ ಅನ್ನು ನ್ಯಾಯಾಲಯದ ಆದೇಶದಿಂದ ಮುಚ್ಚಲಾಗಿದೆ.
ಈ ರೆಸ್ಟೋರೆಂಟ್ ಮುಚ್ಚುವುದರೊಂದಿಗೆ 700 ಕ್ಕೂ ಹೆಚ್ಚು ಉದ್ಯೋಗಿಗಳು ಒಂದೇ ಬಾರಿಗೆ ನಿರುದ್ಯೋಗಿಗಳಾದರು. ನ್ಯಾಯಾಲಯದ ತೀರ್ಪಿನಿಂದ ಉದ್ಯೋಗಿಗಳು ತಮ್ಮ ಇರುವ ಕೆಲಸ ಕಳೆದುಕೊಂಡು ಅಳಲು ತೋಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.