Saturday, 14th December 2024

ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಬಂಧನ

ಲಾಹೋರ್‌: ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಾಗೂ ಲಷ್ಕರ್‌ ಎ ತಯ್ಯಬಾ ಸಂಘಟನೆಯ ಕಾರ್ಯಾಚರಣೆಯ ಕಮಾಂಡರ್‌ ಜಾಕೀರ್‌ ರೆಹಮಾನ್‌ ಲಖ್ವಿಯನ್ನು  ಶನಿವಾರ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಧನ ಸಹಾಯ ಆರೋಪದ ಮೇಲೆ ಬಂಧಿಸಲಾಗಿದೆ.

ಮುಂಬೈ ದಾಳಿ ಪ್ರಕರಣದಲ್ಲಿ 2015ರಲ್ಲಿ ಜಾಮೀನು ಪಡೆದು ಹೊರಗಿದ್ದ ಲಖ್ವಿಯನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.