Sunday, 15th December 2024

ಮ್ಯಾನ್ಮಾರ್‌ ಹಿಂಸಾಚಾರ: ಒಂದೇ ದಿನ 20 ಮಂದಿ ಸಾವು

ಯಾಂಗೊನ್ : ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿರುವುದು ವರದಿಯಾಗಿದೆ.

ಮ್ಯಾನ್ಮಾರ್ ನಲ್ಲಿ ಮಿಲಿಟರಿ ದಂಗೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟನಾ ಮೆರವಣಿಗೆ ಮೇಲೆ ಭದ್ರತಾ ಪಡೆಗಳು ಆಶ್ರುವಾಯು, ರಬ್ಬರ್ ಗಂಡುಗಳನ್ನು, ಜೀವಂತ ಗುಂಡುಗಳನ್ನು ಸಿಡಿಸುತ್ತಿದ್ದಾರೆ. ಪರಿಣಾಮ ಒಂದೇ ದಿನ 20 ಮಂದಿ ಮೃತಪಟ್ಟಿದ್ದಾರೆ.

ಆಂಗ್ ಸಾನ್ ಸೂ ಕಿ ನೇತೃತ್ವದ ಎನ್ ಎಲ್ ಡಿ ಸರ್ಕಾರವನ್ನು ಕಳೆದ ಫೆಬ್ರವರಿ 1 ರಂದು ತೆಗೆದು ಹಾಕಲಾಗಿದ್ದು, ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ಹೀಗಾಗಿ ಮ್ಯಾನ್ಮಾರ್ ಹಿಂಸಾಚಾರ ಹೆಚ್ಚಾಗಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily