ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರ ತಂಡಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಸೇರ್ಪಡೆಯಾಗಲಿದ್ದಾರೆ.
ಭಾರತ ಮೂಲದ ಅಮೆರಿಕನ್ ನೀರಾ ಟಂಡನ್ ರನ್ನು ಬಜೆಟ್ ಮತ್ತು ನಿರ್ವಹಣಾ ಕಚೇರಿಯ ನಿರ್ದೇಶಕರನ್ನಾಗಿ ಬೈಡನ್ ನೇಮಕ ಮಾಡುವ ಸಾಧ್ಯತೆಗಳಿವೆ.
ಶ್ವೇತಭವನದ ಪ್ರಭಾವಿ ಸ್ಥಾನವಾದ ಆಡಳಿತ ಬಜೆಟ್ ನಿರ್ವಹಣಾ ಕಚೇರಿಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಟಂಡನ್ (50) ನೇಮಕವಾಗಲಿದ್ದಾರೆ. ಟಂಡನ್ ಅವರು ಎಡಪಂಥೀಯ ‘ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್’ನ ಮುಖ್ಯ ಕಾರ್ಯ ನಿರ್ವಾ ಹಕರಾಗಿದ್ದಾರೆ. ಟಂಡನ್, ಎಲೆನ್ ಮತ್ತು ಇತರರ ಅಧಿಕೃತ ನೇಮಕವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಮೆಸಾಚ್ಯುಸೆಟ್ಸ್‌ನ ಬೆಡ್‌ಫೋರ್ಡ್‌ನಲ್ಲಿ 1970ರಲ್ಲಿ ಜನಿಸಿದ ನೀರಾ ಟಂಡನ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಕಲಾ ವಿಷಯದಲ್ಲಿ ಪದವಿ ಪಡೆದಿರುವ ಅವರು, 1996ರಲ್ಲಿ ಯಾಲೆ ವಿಶ್ವವಿದ್ಯಾಲಯದಿಂದ ಜ್ಯೂರಿಸ್ ಡಾಕ್ಟರ್ ಪದವಿ ಪಡೆದಿದ್ದಾರೆ.