Thursday, 12th December 2024

ನೇಪಾಳ ಸರ್ಕಾರ ವಿಸರ್ಜನೆ: ನವೆಂಬರ್‌’ನಲ್ಲಿ ಎಲೆಕ್ಷನ್‌

ಕಾಠ್ಮಂಡು: ಶನಿವಾರ ನೇಪಾಳದ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರು ನೇಪಾಳ ಸರ್ಕಾರ ವಿಸರ್ಜಿಸಿದ್ದು, ನವೆಂಬರ್‌ ನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿ ಮಾಡಿದ್ದಾರೆ.

ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಒಲಿಯಾಗಲಿ, ವಿರೋಧ ಪಕ್ಷದ ನಾಯಕ ರಾಗಲಿ ನಿಗದಿಪಡಿಸಿದ ಗಡುವಿನೊಳಗೆ ಸರ್ಕಾರ ರಚನೆಗೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

‘ರಾಷ್ಟ್ರಪತಿಗಳು ಜನಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿದ್ದಾರೆ. ಮೊದಲ ಹಂತದ ಸಾರ್ವತ್ರಿಕ ಚುನಾವಣೆಯನ್ನು ನವೆಂಬರ್ 12 ರಂದು ಮತ್ತು ಎರಡನೇ ಹಂತದ ಚುನಾವಣೆಯನ್ನು ನವೆಂಬರ್ 19 ರಂದು ನಡೆಸಲು ಆದೇಶಿಸಲಾಗಿದೆ.

2020 ರ ಡಿಸೆಂಬರ್‌ನಲ್ಲಿ ಒಲಿ ನೇತೃತ್ವದ ಕ್ಯಾಬಿನೆಟ್ ಮಾಡಿದ್ದ ಸಂಸತ್ತಿನ ವಿಸರ್ಜನೆಯ ನಿರ್ಧಾರದ ವಿರುದ್ಧ ಭಾರೀ ಪ್ರತಿಭಟನೆ ಭುಗಿಲೆದ್ದಿತ್ತು.