Thursday, 12th December 2024

ನೇಪಾಳದಲ್ಲಿ 5.8 ತೀವ್ರತೆಯ ಭೂಕಂಪ

ನವದೆಹಲಿ: ನೆರೆಯ ನೇಪಾಳದಲ್ಲಿ ಮಂಗಳವಾರ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದ ಸುತ್ತಮುತ್ತಲಿನ ನಗರಗಳಲ್ಲಿ ಮತ್ತು ಜೈಪುರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ಉತ್ತರಾಖಂಡದ ಪಿಥೋರಘಢ್ ನಿಂದ ಪೂರ್ವಕ್ಕೆ 148 ಕಿಮೀ ದೂರದ ನೇಪಾಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
“ನನಗೆ ಕಂಪನದ ಅನುಭವವಾಯಿತು. ಇದು ಒಂದು ರೀತಿಯಲ್ಲಿ ಭಯಾನಕವಾಗಿತ್ತು” ಎಂದು ನೋಯ್ಡಾದ ಬಹುಮಹಡಿ ಗೋಪುರದಲ್ಲಿ ವಾಸಿಸುವ ಶಾಂತನು ಅವರು ಹೇಳಿದ್ದಾರೆ. “ಭೂಕಂಪ ಸಂಭವಿಸಿದಾಗ ನಾನು ಸಿವಿಕ್ ಸೆಂಟರ್ನ ಐದನೇ ಮಹಡಿಯಲ್ಲಿದ್ದೆ.
ರಾಜಸ್ಥಾನದ ರಾಜಧಾನಿ ಜೈಪುರದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಇದುವರೆಗೂ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.