Sunday, 15th December 2024

ವಿದೇಶಿ ಪ್ರವಾಸಿಗರ ಸಾಗಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆ: ಆರು ಸಾವು

ನೇಪಾಳ: ಮೌಂಟ್ ಎವರೆಸ್ಟ್ ಪ್ರದೇಶದಿಂದ ವಿದೇಶಿ ಪ್ರವಾಸಿಗರನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ಮಂಗಳವಾರ ನಾಪತ್ತೆ ಯಾಗಿದ್ದು, ಈ ಪ್ರಕರಣ ಸಂಬಂಧ ನಾಪತ್ತೆ ಯಾಗಿದ್ದ ವಿಮಾನ ಪತನಗೊಂಡಿದ್ದು, ಐವರು ಮೆಕ್ಸಿಕನ್ನರು ಸೇರಿ 6 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಅಪಘಾತಕ್ಕೀಡಾದ ನೇಪಾಳದ ಹೆಲಿಕಾಪ್ಟರ್ ಅವಶೇಷಗಳನ್ನು ವಶಪಡಿಸಿಕೊಳ್ಳ ಲಾಗಿದೆ.

“ಹೆಲಿಕಾಪ್ಟರ್ ಲಿಖು ಪಿಕೆ ಗ್ರಾಮ ಮಂಡಳಿ ಮತ್ತು ಸಾಮಾನ್ಯವಾಗಿ ಲಮಾಜುರಾ ದಂಡಾ ಎಂದು ಕರೆಯಲ್ಪಡುವ ದುಧ್ಕುಂಡಾ ಪುರಸಭೆ -2 ರ ಗಡಿಯಲ್ಲಿ ಕಂಡು ಬಂದಿದೆ. ಗ್ರಾಮಸ್ಥರು ಐದು ಶವಗಳನ್ನು ಹೊರತೆಗೆದಿದ್ದಾರೆ” ಎಂದು ಕೋಶಿ ಪ್ರಾಂತ್ಯದ ಪೊಲೀಸ್ ಡಿಐಜಿ ರಾಜೇಶ್ನಾಥ್ ಬಸ್ತೋಲಾ ತಿಳಿಸಿದ್ದಾರೆ.

ಕಾಣೆಯಾದ ಹೆಲಿಕಾಪ್ಟರ್ನಲ್ಲಿ ಐವರು ಮೆಕ್ಸಿಕನ್ ಪ್ರಜೆಗಳು ಮತ್ತು ಪೈಲಟ್ ಚೆಟ್ ಬಿ ಗುರುಂಗ್ ಇದ್ದರು. ಹೆಲಿಕಾಪ್ಟರ್‌ನಲ್ಲಿದ್ದ ಆರು ಜನರಲ್ಲಿ ಐವರ ಅವಶೇಷಗಳು ಅಪಘಾತದ ಸ್ಥಳದಲ್ಲಿ ಪತ್ತೆಯಾಗಿವೆ.