Saturday, 7th September 2024

ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಪ್ರಮಾಣ ವಚನ ಸ್ವೀಕಾರ

ಕಾಠ್ಮಂಡು: ನೇಪಾಳದ ಪ್ರಧಾನಿಯಾಗಿ ಕೆ.ಪಿ ಶರ್ಮಾ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆ.ಪಿ ಶರ್ಮಾಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.

1952 ರಲ್ಲಿ ಜನಿಸಿದ ಕೆಪಿ ಶರ್ಮಾ ಒಲಿ 1966 ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿ, 1970 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಸಿಪಿಎನ್) ಸೇರಿದರು.

ಪ್ರಜಾಪ್ರಭುತ್ವ ಚಳವಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಗಣರಾಜ್ಯ ರಾಜ್ಯಕ್ಕಾಗಿ ಒತ್ತಾಯಿಸಿದ್ದರಿಂದ ಅವರನ್ನು ಮೊದಲು ಸಾರ್ವಜನಿಕ ಅಪರಾಧ ಕಾಯ್ದೆಯಡಿ ಬಂಧಿಸಲಾಯಿತು.

1973 ರಲ್ಲಿ, ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಸೇರಿದಂತೆ ವಿವಿಧ ಆರೋಪಗಳ ಮೇಲೆ ಅವರನ್ನು ಬಂಧಿಸಲಾಯಿತು ಮತ್ತು 14 ವರ್ಷಗಳ ಕಾಲ ಜೈಲಿನಲ್ಲಿರಿಸಲಾಯಿತು. 4 ವರ್ಷಗಳ ಏಕಾಂತ ಸೆರೆವಾಸವನ್ನು ಅನುಭವಿಸಿದರು.1987ರಲ್ಲಿ ಜೈಲಿನಿಂದ ಬಿಡುಗಡೆಯಾದ ಅವರು ಅಂದಿನ ಸಿಪಿಎನ್ (ಎಂ-ಎಲ್) ಕೇಂದ್ರ ಸಮಿತಿ ಸದಸ್ಯರಾಗಿ ಜವಾಬ್ದಾರಿಗಳನ್ನು ವಹಿಸಿದ್ದರು. ಅವರು ೧೯೯೦ ರವರೆಗೆ ಲುಂಬಿನಿ ವಲಯದ ಉಸ್ತುವಾರಿ ಯಾಗಿ ಸೇವೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!