Monday, 9th December 2024

ಯೇತಿ ಏರ್​​ಲೈನ್ಸ್ ಪತನ: 70 ಜನರ ಮೃತದೇಹ ಪತ್ತೆ

ಠ್ಮಂಡು: ನೇಪಾಳ ಪೋಖರಾ ವಿಮಾನ ನಿಲ್ದಾಣದ ಬಳಿ ರನ್​​ ವೇದಲ್ಲಿ ಪತನಗೊಂಡ ಯೇತಿ ಏರ್​​ಲೈನ್ಸ್​​ಗೆ ಸೇರಿದ ವಿಮಾನದಲ್ಲಿದ್ದ 72 ಮಂದಿಯೂ ಮೃತಪಟ್ಟಿದ್ದು, ಅದರಲ್ಲಿ, 70 ಜನರ ಮೃತದೇಹ ಸಿಕ್ಕಿದೆ.

ಎರಡು ಶವಗಳಿಗಾಗಿ ಇಂದು ಬೆಳಗ್ಗೆಯಿಂದ ಹುಡುಕಾಟ ನಡೆದಿದೆ. ಇವರಲ್ಲಿ ಐವರು ಭಾರತೀಯರು ಸೇರಿ, ಒಟ್ಟು 42 ಮಂದಿಯ ಗುರುತು ಪತ್ತೆ ಯಾಗಿದೆ.

ಜನವರಿ 15ರಂದು ಯೇತಿ ಏರ್​ವೇಸ್​​ಗೆ ಸೇರಿದ ವಿಮಾನವೊಂದು ಕಠ್ಮಂಡುವಿನಿಂದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು. ಲ್ಯಾಂಡ್​ ಆಗಲು ಕೆಲವೇ ಕ್ಷಣದ ಮೊದಲು ಅಲ್ಲಿಯೇ ಇದ್ದ ಸೇತಿ ಗಂಡಕಿ ನದಿ ದಡದ ಮೇಲೆ ಪತನಗೊಂಡಿದೆ. ಕಡಿದಾದ ಕಂದಕಕ್ಕೆ ವಿಮಾನ ಬಿದ್ದು, ಬೆಂಕಿ ಹೊತ್ತಿ ಉರಿದಿದೆ.

ಜನವರಿ 15ರಂದು ವಿಮಾನ ಬೆಳಗ್ಗೆ 10.33ಕ್ಕೆ ಕಠ್ಮಂಡುವಿನ ತ್ರಿಭುವನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ಇದರಲ್ಲಿ 53 ನೇಪಾಳಿ ನಾಗರಿಕರು, ಐವರು ಭಾರತೀಯರು (ಉತ್ತರ ಪ್ರದೇಶದವರು), ನಾಲ್ವರು ರಷ್ಯನ್ನರು ಮತ್ತು ಒಬ್ಬ ಐರಿಶ್, ಇಬ್ಬರು ಕೊರಿಯನ್ನರು ಮತ್ತು ಒಬ್ಬರು ಅರ್ಜೆಂಟೀನಾ ಪ್ರಜೆ ಮತ್ತು ಒಬ್ಬ ಫ್ರೆಂಚ್​ ನಾಗರಿಕ ಇದ್ದರು.