Thursday, 19th September 2024

ಇಸ್ರೇಲ್ ಚುನಾವಣೆ: ಬೆಂಜಮೀನ್ ನೆತನ್ಯಾಹು ಮತ್ತೆ ಅಧಿಕಾರಕ್ಕೆ?

ಟೆಲ್ ಅವೀವ್: ಇಸ್ರೇಲ್ ಸಾರ್ವತ್ರಿಕ ಚುನಾವಣೋತ್ತರ ಸಮೀಕ್ಷೆಯಲ್ಲಿ ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರು ಮತ್ತೆ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ.

ಇಸ್ರೇಲ್ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಪ್ರಧಾನಿ ಯೊಬ್ಬರ ವಿರುದ್ಧ ಭ್ರಷ್ಟಾಚಾರದ ಪ್ರಕರಣದ ನಂತರ ಬೆಂಜಮಿನ್ ನೆತ ನ್ಯಾಹು ಅಧಿಕಾರ ಕಳೆದುಕೊಂಡಿದ್ದರು.

ವಿಚಾರಣೆ ಎದುರಿಸಿದ್ದರೂ ಬೆಂಜಮಿನ್ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದರು. ಬೆನ್ನಿ ಗಾಂಟ್ಜ್ ಜೊತೆ 18 ತಿಂಗಳ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡು ಸರ್ಕಾರ ಉಳಿಸಿಕೊಂಡಿದ್ದರು. ರಾಜೀನಾಮೆ ನೀಡದೆ ವಿಚಾರಣೆ ಎದುರಿಸಿದ್ದರು. ಇನ್ನೊಂದೆಡೆ, ಸಂಸತ್ತಿನಲ್ಲಿ 120 ಸದಸ್ಯರು ಲೇಬರ್ ಪಾರ್ಟಿಯ ಮಾಜಿ ಅಧ್ಯಕ್ಷ, ವಿಪಕ್ಷ ನಾಯಕ ಹೆರ್ಜೋಗ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.

ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ ಮತ್ತು ಮಿತ್ರಪಕ್ಷಗಳು 120-ಸೀಟುಗಳ ನೆಸೆಟ್‌(Knesset)ನಲ್ಲಿ ಬಹುಮತ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.

ಅಲ್ಟ್ರಾನ್ಯಾಷನಲಿಸ್ಟ್ ರಿಲಿಜಿಯಸ್ ಝಿಯೋನಿಸಂ ಪಕ್ಷಕ್ಕೆ ಬೆಂಬಲ ಹೆಚ್ಚಾಗಿ ಸಿಕ್ಕಿದ್ದು, ಪಕ್ಷದ ಅಭ್ಯರ್ಥಿ ಇಟಮಾರ್ ಬೆನ್-ಗ್ವಿರ್ ಮುನ್ನಡೆ ಪಡೆಯಲಿದ್ದಾರೆ ಹಾಗೂ ಅವರ ಪಕ್ಷ 15 ಸ್ಥಾನಗಳಿಸುವ ಸಾಧ್ಯತೆಯಿದ್ದು, ಮೂರನೇ ಸ್ಥಾನಕ್ಕೇರಲಿದೆ.

ಈ ವಾರದಲ್ಲೇ ಇಸ್ರೇಲ್ ಚುನಾವಣೆ ಫಲಿತಾಂಶ ಹೊರ ಬರಲಿದೆ. ನಾಲ್ಕು ವರ್ಷಗಳಿ ಗಿಂತಲೂ ಕಡಿಮೆ ಅವಧಿಯಲ್ಲಿ ಇಸ್ರೇಲ್‌ನ ಐದನೇ ಚುನಾವಣೆಯು ಅನೇಕ ಇಸ್ರೇಲಿ ಮತದಾರರನ್ನು ಕೆರಳಿಸಿತು.