ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ-ಬೈಡೆನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಿದರು.
ಯುಎಸ್ ಕ್ಯಾಪಿಟಲ್ ನಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಹಾಗೂ ಭದ್ರತೆಯ ನಡುವೆ ನಡೆದ ಸಮಾರಂಭದಲ್ಲಿ 46ನೇ ಅಧ್ಯಕ್ಷ ರಾಗಿ ಜೋ- ಬೈಡೆನ್ ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ಅಮೆರಿಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಾಬರ್ಟ್ ಜಾನ್ಸ್ ಜೋ- ಬೈಡೆನ್ ಪ್ರಮಾಣ ವಚನ ಬೋಧಿಸಿ ದರು.
ಬೈಡೆನ್ ಮಾತನಾಡಿ, ಹೊಸ ಇತಿಹಾಸ ಸೃಷ್ಟಿಯಾಗಿದೆ. ಪ್ರಜಾತಂತ್ರದ ಗೆಲುವಾಗಿದೆ. ಸಂವಿಧಾನ, ಅಮೆರಿಕದ ಜನರ ದಿನವಾಗಿದೆ. ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಮುಂದೆ ಹಲವಾರು ಸವಾಲುಗಳಿದ್ದು, ಒಗ್ಗಟ್ಟಾಗಿ ಸವಾಲನ್ನು ಎದುರಿಸೋಣ ಎಂದರು.
ಅಭ್ಯರ್ಥಿಯಾಗಿ ವಿಜಯೋತ್ಸವ ಆಚರಿಸುತ್ತಿಲ್ಲ, ಪ್ರಜಾಪ್ರಭುತ್ವದ ಕಾರಣದಿಂದ ವಿಜಯೋತ್ಸವ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ಮಹತ್ವದು ಎಂಬುದನ್ನು ಮತ್ತೆ ಕಲಿತಿದ್ದೇವೆ. ಪ್ರಜಾಪ್ರಭುತ್ವ ಮೇಲುಗೈ ಸಾಧಿಸಿದೆ ಎಂದು ಅವರು ಹೇಳಿದರು.
ಸಂವಿಧಾನ, ಪ್ರಜಾಪ್ರಭುತ್ವ, ಅಮೆರಿಕದ ಜನತೆಗೆ ಬದ್ದನಾಗಿರುತ್ತೇನೆ. ಎಲ್ಲವನ್ನು ನಿಮ್ಮ ಸೇವೆಯಲ್ಲಿ ಇಡುತ್ತೇನೆ. ಅಧಿಕಾರದ ಬಗ್ಗೆ ಅಲ್ಲ ಆದರೆ ಸಾಧ್ಯತೆಗಳ ಬಗ್ಗೆ ಯೋಚಿಸುತ್ತೇನೆ.
ಅಮೆರಿಕಾದ ಇತಿಹಾಸದಲ್ಲಿ ರಾಷ್ಟ್ರೀಯ ಕಚೇರಿಗೆ ಮೊದಲ ಮಹಿಳೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.