Friday, 18th October 2024

ಝೆಲೆನ್ಸ್ಕಿ ಪದಚ್ಯುತಿ ಯತ್ನ: ಮಾಜಿ ಅಧ್ಯಕ್ಷರಿಗೆ ಪಟ್ಟಕಟ್ಟಲು ತಯಾರಿ

ಕೀವ್/ಮಾಸ್ಕೋ: ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಅವರ ಪದಚ್ಯುತಿಗೆ ರಷ್ಯಾ ಮುಂದಾಗಿದ್ದು, ಹೊಸ ಅಧ್ಯಕ್ಷರ ನೇಮಕಕ್ಕೆ ಹುನ್ನಾರ ನಡೆಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮಾಜಿ ಅಧ್ಯಕ್ಷರಿಗೆ ಪಟ್ಟಕಟ್ಟಲು ತಯಾರಿ ಮಾಡಿಕೊಂಡಿದ್ದಾರೆ.

ಉಕ್ರೇನ್ ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಗೆ ಅಧ್ಯಕ್ಷ ಸ್ಥಾನ ಕಲ್ಪಿಸಲು ಪುಟಿನ್ ಚಿಂತನೆ ನಡೆಸಿದ್ದಾರೆ. ಇದಕ್ಕೆ ಪೂರ್ವಭಾವಿ ಯಾಗಿ ಮಿನ್ಸ್ಕ್ ನಗರಕ್ಕೆ ವಿಕ್ಟರ್ ಅವರನ್ನು ರಷ್ಯಾ ಕರೆದುಕೊಂಡು ಬಂದಿದೆ. ವಿಕ್ಟರ್ ನನ್ನು ಉಕ್ರೇನ್ ಹೊಸ ಅಧ್ಯಕ್ಷ ನನ್ನಾಗಿ ಮಾಡಿ ಅಧಿಕೃತವಾಗಿ ಘೋಷಿಸಲು ಪುಟಿನ್ ತಯಾರಿ ನಡೆಸಿದ್ದಾರೆ.

2010 ರಲ್ಲಿ ಉಕ್ರೇನ್‌ ನ ಅಧ್ಯಕ್ಷರಾಗಿ ಚುನಾಯಿತರಾದ ಯಾನುಕೋವಿಚ್ ಅವರು ಬಾಕಿ ಉಳಿದಿರುವ EU ಅಸೋಸಿಯೇಷನ್ ​​ಒಪ್ಪಂದವನ್ನು ತಿರಸ್ಕರಿಸಿದರು. ಬದಲಿಗೆ ರಷ್ಯಾದೊಂದಿಗೆ ನಿಕಟ ಸಂಬಂಧಗಳನ್ನು ಮುಂದುವರಿಸಲು ಮುಂದಾಗಿದ್ದರು. ಇದು ಅನೇಕ ಬೆಳವಣಿಗೆಗಳಿಗೆ ನಾಂದಿಯಾಗಿ ಯಾನುಕೋವಿಚ್ ಹುದ್ದೆ ತೊರೆಯುವಂತಾ ಯಿತು.

ನಂತರ ಓಲೆಕ್ಸಾಂಡರ್ ತುರ್ಚಿನೋವ್ ಮತ್ತು ಪೆಟ್ರೋ ಪೊರೊಶೆಂಕೊ ಅಧಿಕಾರ ವಹಿಸಿಕೊಂಡರು. 2019 ರಲ್ಲಿ ಝೆಲೆನ್ಸ್ಕಿಯು ಉಕ್ರೇನ್‌ನ ಅಧ್ಯಕ್ಷರಾಗಿ ಆಯ್ಕೆಯಾದರು.