ಬೆಂಗಳೂರು: ಮಾನವನ ಜೀವಿತಾವಧಿ ಹೆಚ್ಚಿಸುವಲ್ಲಿ ಹಣ್ಣಿನ ನೊಣಗಳು (Fruit Flies) ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು (New Research) ದೃಢಪಡಿಸಿದೆ. ನೊಣಗಳ ಕರುಳಿನಲ್ಲಿ (gut) ಇನ್ಸುಲಿನ್ ನಿಯಂತ್ರಿಸುವ (insulin regulating) ‘ನ್ಯೂರೋಪೆಪ್ಟೈಡ್ ಎಫ್’ ಹಾರ್ಮೋನ್ (neuropeptide F hormone) ಅನ್ನು ನಿಗ್ರಹಿಸುವ ಮೂಲಕ ಆಯುಷ್ಯ ಹೆಚ್ಚಿಸಬಹುದು ಎಂಬುದನ್ನು ಯುಎಸ್ ನ ಬ್ರೌನ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಮಾನವನ ದೀರ್ಘಾಯುಷ್ಯ ನಿರ್ಧರಿಸುವಲ್ಲಿ ಕರುಳಿನ ಪಾತ್ರವು ಪ್ರಮುಖ. ಹಣ್ಣಿನ ನೊಣಗಳು ಕರುಳಿನ ಹಾರ್ಮೋನ್ ಅನ್ನು ನಿಯಂತ್ರಿಸಿ ತಮ್ಮ ಜೀವಿತಾವಧಿ ಹೆಚ್ಚಿಸುತ್ತದೆ. ಎರಡು ಜಾತಿಯ ಹಣ್ಣಿನ ನೊಣಗಳು ಒಂದೇ ರೀತಿಯ ಜೀನ್ ಮತ್ತು ಹಾರ್ಮೋನ್‌ಗಳನ್ನು ಹೊಂದಿದ್ದು, ಇದು ಮಾನವರಿಗೆ ಮುಖ್ಯವಾಗಿದೆ ಎನ್ನುತ್ತಾರೆ ಅಧ್ಯಯನಕಾರರು.
ಸಂಶೋಧನೆಯ ಪ್ರಕಾರ ಹಣ್ಣಿನ ನೊಣಗಳ ಕರುಳಿನ ಹಾರ್ಮೋನುಗಳಿಂದ ಅಭಿವೃದ್ಧಿಪಡಿಸಲಾದ ಔಷಧಗಳು ಮಾನವರಲ್ಲಿ ಮಧುಮೇಹ ಮತ್ತು ಬೊಜ್ಜು ನಿಯಂತ್ರಿಸಲು ಬಳಸಬಹುದು ಎಂದು ಹೇಳಿದೆ. ಈ ಕುರಿತು ಸಂಶೋಧನೆಯ ವರದಿ ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರಕಟವಾಗಿವೆ.
ನಿರ್ದಿಷ್ಟ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಕಡಿಮೆ ಮಾಡುವುದು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ. ಇದು ಪ್ರಾಣಿಗಳಲ್ಲಿ ಜೀವಿತಾವಧಿಯನ್ನು ವಿಸ್ತರಿಸುತ್ತದೆ ಎಂದು ಹಿಂದಿನ ಅಧ್ಯಯನಗಳಿಂದ ತಿಳಿದುಬಂದಿದೆ.
ಹಣ್ಣಿನ ನೊಣಗಳು ಕಡಿಮೆ ಮಟ್ಟದ ನ್ಯೂರೋಪೆಪ್ಟೈಡ್ ಎಫ್ ಹಾರ್ಮೋನ್ ಅನ್ನು ಉತ್ಪಾದಿಸುತ್ತವೆ.
ಇದರಿಂದಾಗಿ ಅವುಗಳಲ್ಲಿ ಇನ್ಸುಲಿನ್ ಕಡಿಮೆ ಮಟ್ಟದಲ್ಲಿದೆ. ನೊಣಗಳು ಸೇವಿಸುವ ಆಹಾರದಿಂದ ಅವುಗಳ ಕರುಳಿನಲ್ಲಿನ ಹಾರ್ಮೋನ್ ಉತ್ಪಾದನೆ ಅವುಗಳು ಮೆದುಳಿನ ಚಟುವಟಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ.
ನ್ಯೂರೋಪೆಪ್ಟೈಡ್ ಎಫ್ ಹಾರ್ಮೋನ್ ಅನ್ನು ನಿಗ್ರಹಿಸುವುದು ನೊಣಗಳಲ್ಲಿ ದೀರ್ಘಾಯುಷ್ಯವನ್ನು ವಿಸ್ತರಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಅವುಗಳ ಮೆದುಳಿನಲ್ಲಿ ಸಂಬಂಧಿತ ಪ್ರೊಟೀನ್‌ಗಳ ಚಟುವಟಿಕೆಯನ್ನು ತಡೆಯುತ್ತದೆ. ಈ ಪ್ರೊಟೀನ್‌ಗಳು ‘ಜುವೆನೈಲ್’ ಹಾರ್ಮೋನ್‌ಗಳ ಉತ್ಪಾದನೆಯನ್ನು ನಿಯಂತ್ರಿಸುತ್ತವೆ. ಇದು ದೇಹಾರೋಗ್ಯವನ್ನು ಕಾಪಾಡುತ್ತದೆ.
ಸಂಶೋಧನೆಯ ಪ್ರಕಾರ ನೊಣಗಳಲ್ಲಿ ಕರುಳಿನ ನ್ಯೂರೋಪೆಪ್ಟೈಡ್ ಎಫ್ ಅಧಿಕ ಉತ್ಪಾದನೆಯು ಅವುಗಳ ದೀರ್ಘಾಯುಷ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಎಂದು ಬ್ರೌನ್ ವಿಶ್ವವಿದ್ಯಾಲಯದ ಜೀವಶಾಸ್ತ್ರದ ಪ್ರಾಧ್ಯಾಪಕರಾದ ಅಧ್ಯಯನ ಲೇಖಕ ಮಾರ್ಕ್ ಟಾಟರ್ ಹೇಳಿದ್ದಾರೆ.
ಮಾನವರು ನ್ಯೂರೋಪೆಪ್ಟೈಡ್ ಎಫ್ ಅಥವಾ ಜುವೆನೈಲ್ ಹಾರ್ಮೋನುಗಳನ್ನು ಉತ್ಪಾದಿಸುವುದಿಲ್ಲ. ಬದಲಾಗಿ, ಕರುಳಿನ ಹಾರ್ಮೋನುಗಳು ಮಾನವರಲ್ಲಿ ಇನ್ಸುಲಿನ್ ಅನ್ನು ನಿಯಂತ್ರಿಸುತ್ತದೆ.
Lotus Stem: ಕಮಲದ ಹೂವಿನ ದಂಟನ್ನು ಸೇವಿಸಿದರೆ ಸಾಕು; ಹಲವು ಆರೋಗ್ಯ ಸಮಸ್ಯೆಗಳು ಮಾಯ!
ಮಧುಮೇಹ ಮತ್ತು ಬೊಜ್ಜು ಔಷಧಗಳು, ಇನ್ಸುಲಿನ್ ಅನ್ನು ನಿಯಂತ್ರಿಸುವಲ್ಲಿ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಇದು ಮಾನವನ ವಯಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಲೇಖಕ ಮಾರ್ಕ್ ಟಾಟರ್.