Saturday, 23rd November 2024

ಕೋರ್ಟ್​ ಆವರಣಕ್ಕೆ ಜಿರಲೆ ಬಿಟ್ಟ…!

ನ್ಯೂಯಾರ್ಕ್​: ಕೋರ್ಟ್​ನಲ್ಲಿ ವಿಡಿಯೋ ಮಾಡಲು ಅಡ್ಡಿ ಉಂಟು ಮಾಡಿದ್ದರಿಂದ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಕೋರ್ಟ್​ ಆವರಣ ಹಾಗೂ ನ್ಯಾಯಮೂರ್ತಿಗಳ ಕೊಠಡಿ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಿರಲೆ ಬಿಟ್ಟು ಎಲ್ಲರನ್ನೂ ಸುಸ್ತು ಮಾಡಿದ್ದಾನೆ.

ಭೂ ವಿವಾದಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಿ ವಿಚಾ ರಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ವಿಡಿಯೋ ಮಾಡಲು ಶುರು ಮಾಡಿದ. ವಿಚಾರಣೆಗೆ ಒಳಗಾದವರು ಇವನ ವಿರೋಧಿ ಗಳಾಗಿದ್ದರಿಂದ ಅವರ ಮರ್ಯಾದೆ ತೆಗೆಯುವ ಉದ್ದೇಶದಿಂದ ವಿಡಿಯೋ ಮಾಡಲು ಶುರು ಮಾಡಿದ.

ಆದರೆ ಕೋರ್ಟ್​ ಆವರಣದಲ್ಲಿ ಇದಕ್ಕೆ ಅವಕಾಶ ಇರದ ಹಿನ್ನೆಲೆಯಲ್ಲಿ ಆತನನ್ನು ಹೊರಕ್ಕೆ ಕಳಿಸಲಾಯಿತು. ಇದೇ ಸಿಟ್ಟಿನಿಂದ ಈತ ಈ ಕೃತ್ಯ ಎಸಗಿದ್ದ. ನಂತರ ಕೀಟನಾಶಕದವರನ್ನು ಕರೆಯಿಸಿ ಕೋರ್ಟ್​ ತುಂಬೆಲ್ಲಾ ಕೀಟನಾಶಕ ಸಿಂಪಡಣೆ ಮಾಡಿಸಿ ಜಿರಲೆಗಳನ್ನು ಸಾಯಿಸಲಾಯಿತು ಎಂದು ವರದಿಯಾಗಿದೆ.