ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೋರೇಷನ್ (ಎಫ್‌ಡಿಐಸಿ) ಸಿಗ್ನೇಚರ್ ಬ್ಯಾಂಕ್ ಅನ್ನು ತನ್ನ ಹತೋಟಿಗೆ ಪಡೆದುಕೊಂಡಿದೆ. ಕಳೆದ ವರ್ಷದ ಅಂತ್ಯದಲ್ಲಿ ಈ ಬ್ಯಾಂಕ್‌ನಲ್ಲಿ ಆಸ್ತಿ ರೂಪದಲ್ಲಿ 110.36 ಬಿಲಿಯನ್ ಡಾಲರ್ ಮತ್ತು ಡೆಪಾಸಿಟ್ ಮೂಲದಲ್ಲಿರುವ 88.59 ಡಾಲರ್ ಇತ್ತು ಎಂದು ನ್ಯೂಯಾರ್ಕ್‌ನ ಹಣಕಾಸು ಸೇವಾ ಇಲಾಖೆ ತಿಳಿಸಿದೆ.
“ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಥವಾ ಎಸ್‌ವಿಬಿ ಠೇವಣಿದಾರರು ತಮ್ಮ ಎಲ್ಲ ಮೊತ್ತವನ್ನು ಮಾರ್ಚ್ 13ರಿಂದ ಹಿಂಪಡೆಯುವ ಅವಕಾಶವಿದೆ,” ಎಂದು ತಿಳಿಸಿದೆ.
2008ರ ಹಣಕಾಸು ಬಿಕ್ಕಟ್ಟಿನ ಬಳಿಕ ಯುಎಸ್‌ನಲ್ಲಿ ನಡೆದ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ. ಡೆಪಾಸಿಟ್‌ದಾರರು, ಮುಖ್ಯವಾಗಿ ತಾಂತ್ರಿಕ ಕೆಲಸಗಾರರು ಮತ್ತು ಬಂಡವಾಳ-ಬೆಂಬಲಿತ ಕಂಪನಿಗಳು ತಮ್ಮ ಡೆಪಾಸಿಟ್ ಮೊತ್ತವನ್ನು ವಿತ್‌ಡ್ರಾ ಮಾಡಲು ಆರಂಭ ಮಾಡಿದ ಬಳಿಕ ಬ್ಯಾಂಕ್‌ನಲ್ಲಿ ವೈಫಲ್ಯತೆ ಕಂಡುಬಂದಿದೆ.