Friday, 22nd November 2024

ಹಳದಿ ಸಮುದ್ರಕ್ಕೆ ಅಪ್ಪಳಿಸಿದ ಮೊದಲ ಮಿಲಿಟರಿ ಪತ್ತೇದಾರಿ ಉಪಗ್ರಹ

ಸಿಯೋಲ್: ಉತ್ತರ ಕೊರಿಯಾದ ಉನ್ನತ ಅಧಿಕಾರಿಗಳು ಪತ್ತೇದಾರಿ ಉಪಗ್ರಹವನ್ನು ಉಡಾವಣೆ ಮಾಡಲು ಎರಡನೇ ಪ್ರಯತ್ನಕ್ಕೆ ಪ್ರತಿಜ್ಞೆ ಮಾಡಿದ್ದಾರೆ.

ಉತ್ತರ ಕೊರಿಯಾದಿಂದ ಉಡಾವಣೆಯಾದ ಮೊದಲ ಮಿಲಿಟರಿ ಪತ್ತೇದಾರಿ ಉಪಗ್ರಹ ಇಂಜಿನ್ ಸಮಸ್ಯೆಯಿಂದಾಗಿ ಹಳದಿ ಸಮುದ್ರಕ್ಕೆ ಅಪ್ಪಳಿಸಿದೆ.

ಬಳಿಕ ಅದು ತನ್ನ ಎರಡನೇ ಉಡಾವಣೆಯನ್ನು ಸಾಧ್ಯವಾದಷ್ಟು ಬೇಗ ನಡೆಸಲು ಯೋಜಿಸಿದೆ.

ಮೇ ಅಂತ್ಯದಲ್ಲಿ ಮಿಲಿಟರಿ ವಿಚಕ್ಷಣಾ ಉಪಗ್ರಹವನ್ನು ಹೊತ್ತೊಯ್ಯುತ್ತಿದ್ದ ಉತ್ತರ ಕೊರಿಯಾದ ರಾಕೆಟ್ ಲಿಫ್ಟ್ ಆಫ್ ಆದ ಕೂಡಲೇ ಪತನ ಗೊಂಡಿತು. ಇದರಿಂದ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮೇಲೆ ಕಣ್ಗಾವಲು ಇಡಲು ಬಾಹ್ಯಾಕಾಶ ಆಧಾರಿತ ವ್ಯವಸ್ಥೆ ರೂಪಿಸಲು ನಾಯಕ ಕಿಮ್ ಜಾಂಗ್ ಉನ್ ಯೋಜಿಸಿದ್ದರು. ಆದರೆ ಈ ಉಡಾವಣೆ ವಿಫಲ ವಾಗಿರುವುದರಿಂದ ಅವರ ಯೋಜನೆಗೆ ಹಿನ್ನಡೆಯಾಗಿದೆ.

ಕಿಮ್ ಮತ್ತು ಇತರ ಉನ್ನತ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ಭಾನುವಾರ ಕೊನೆಗೊಂಡ ಮೂರು ದಿನಗಳ ಆಡಳಿತ ಪಕ್ಷದ ಸಭೆಯಲ್ಲಿ ವಿಫಲ ಉಡಾವಣೆ ಮತ್ತು ಅದರ ಶಸ್ತ್ರಾಸ್ತ್ರಗಳನ್ನು ಆಧುನೀಕರಿಸುವ ಉತ್ತರ ಕೊರಿಯಾದ ಪ್ರಯತ್ನಗಳ ಕುರಿತು ಹೆಚ್ಚು ಚರ್ಚಿಸಲಾಯಿತು. ಸಭೆಯ ಕುರಿತು ವಿವರಣೆಯನ್ನು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಸ್ಪಷ್ಟವಾಗಿ ಹೇಳಲಿಲ್ಲ.

ಆದರೆ ಸಭೆಯ ವರದಿಯು ಉಪಗ್ರಹ ಉಡಾವಣೆಯ ಸಿದ್ಧತೆಗಳನ್ನು ಬೇಜವಾಬ್ದಾರಿಯಿಂದ ನಡೆಸಿದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದು, ಕಠಿಣ ಕ್ರಮದ ಎಚ್ಚರಿಕೆ ರವಾನಿಸಿದೆ.