ಇಸ್ಲಾಮಾಬಾದ್: ಪಾಕಿಸ್ತಾನ (Pakistan)ದ ಕಡ ತೀರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬೃಹತ್ ಸಂಗ್ರಹ ಪತ್ತೆಯಾಗಿದ್ದು, ಇದು ಆರ್ಥಿಕವಾಗಿ ತತ್ತರಿಸಿದರುವ ಆ ದೇಶಕ್ಕೆ ಚೇತರಿಕೆ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ (Massive Oil, Gas Reserve). ತೈಲ ಮತ್ತು ಅನಿಲ ನಿಕ್ಷೇಪಗಳ ಉಪಸ್ಥಿತಿಯನ್ನು ಪರಿಶೀಲಿಸಲು ಮೂರು ವರ್ಷಗಳಿಂದ ಸಮೀಕ್ಷೆಯನ್ನು ಕೈಗೊಳ್ಳಲಾಯಿತು. ಈ ವೇಳೆ ವಿಶ್ವದ 4ನೇ ಅತೀದೊಡ್ಡ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಲೇ ಈ ಸಂಗ್ರವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ತೈಲ ಹೊರ ತೆಗೆಯುವ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಹಲವು ವರ್ಷಗಳೇ ಬೇಕಾಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು, ʼʼಇದನ್ನು ಹೊರ ತೆಗೆಯಲು ಅಪಾರ ಪ್ರಮಾಣದ ಹೂಡಿಕೆ ಅಗತ್ಯ. ಅಂದಾಜು 5 ಬಿಲಿಯನ್ ಅಮೆರಿಕನ್ ಡಾಲರ್ ಬೇಕಾಬಹುದು. ಅಲ್ಲದೆ ತೈಲ ಹೊರತೆಗೆಯಲು ಕನಿಷ್ಠ 5 ವರ್ಷವಾದರೂ ಬೇಕಾಗಬಹುದುʼʼ ಎಂದು ಹೇಳಿದ್ದಾರೆ.
ಸರ್ಕಾರ ಇತ್ತ ಗಮನ ಹರಿಸಿ ಶೀಘ್ರದಲ್ಲಿಯೇ ಕ್ರಮ ಕೈಗೊಂಡರೆ ದೇಶದ ಆರ್ಥಿಕ ಸ್ಥಿತಿ ಸುಧಾರಿಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
🚨 BREAKING NEWS :-
— Asad Nasir (@asadnasir2000) September 7, 2024
The 🌍 world's fourth largest 🛢️ oil and gas reserves have been found in the seas of 🇵🇰 Pakistan
The location has been identified together with a friendly country.✅✅✅ pic.twitter.com/b3GN1HLY1V
ನೀಲಿ ನೀರಿನ ಆರ್ಥಿಕತೆ
ʼʼಈ ಬೃಹತ್ ತೈಲ ನಿಕ್ಷೇಪವನ್ನು ‘ನೀಲಿ ನೀರಿನ ಆರ್ಥಿಕತೆ’ (Blue water economy) ಎಂದು ಪರಿಗಣಿಸಲು ನಿರ್ಧರಿಸಿದ್ದೇವೆ. ಬಿಡ್ಡಿಂಗ್ ಮತ್ತು ಪರಿಶೋಧನೆಯ ಪ್ರಸ್ತಾಪಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಸಂಶೋಧನಾ ಕಾರ್ಯವನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು. ಆದಾಗ್ಯೂ ತೈಲವನ್ನು ಹೊರತೆಗೆಯುವ ಕಾರ್ಯ ಆರಂಭವಾಗಲು ಹಲವು ವರ್ಷಗಳೇ ಬೇಕಾಬಹುದುʼʼ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪ್ರಸ್ತುತ ವೆನೆಜುವೆಲಾ ಸುಮಾರು 3.4 ಬಿಲಿಯನ್ ಬ್ಯಾರೆಲ್‌ಗಳೊಂದಿಗೆ ತೈಲ ನಿಕ್ಷೇಪದಲ್ಲಿ ಮುಂಚೂಣಿಯಲ್ಲಿದೆ. ಸೌದಿ ಅರೇಬಿಯಾ, ಇರಾನ್, ಕೆನಡಾ ಮತ್ತು ಇರಾಕ್ ನಂತರದ ಸ್ಥಾನಗಳಲ್ಲಿವೆ. ಅದಾಗ್ಯೂ ಅಮೆರಿಕ ಹೆಚ್ಚು ಬಳಕೆಯಾಗದ ಶೇಲ್ ತೈಲ ನಿಕ್ಷೇಪಗಳನ್ನು ಹೊಂದಿದೆ.
ಡಾನ್ ನ್ಯೂಸ್ ಟಿವಿಯೊಂದಿಗೆ ಮಾತನಾಡಿದ ಓಗ್ರಾ (Oil and Gas Regulatory Authority) ಮಾಜಿ ಸದಸ್ಯ ಮುಹಮ್ಮದ್ ಆರಿಫ್, ʼʼಸಮೀಕ್ಷೆ ವೇಳೆ ತೈಲ ನಿಕ್ಷೇಪದ ಬಗ್ಗೆ ದೇಶ ನಿರೀಕ್ಷೆ ಹೊಂದಿದ್ದರೂ ಇರುವ ಬಗ್ಗೆ ಶೇ. 100ರಷ್ಟು ಖಚಿತತೆ ಇರಲಿಲ್ಲʼʼ ಎಂದು ತಿಳಿಸಿದ್ದಾರೆ. ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಈ ನಿಕ್ಷೇಪ ಸಾಕಾಗುತ್ತವೆಯೇ ಎಂದು ಕೇಳಿದಾಗ ಇದು ಉತ್ಪಾದನೆಯ ಗಾತ್ರ ಮತ್ತು ಚೇತರಿಕೆ ದರವನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ. ನಿಕ್ಷೇಪಗಳನ್ನು ಹೊರತೆಗೆಯಲು ಮತ್ತು ಇಂಧನವನ್ನು ಉತ್ಪಾದಿಸಲು ಮೂಲಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: Giorgia Meloni: ರಷ್ಯ- ಉಕ್ರೇನ್ ಯುದ್ಧ ಬಗೆಹರಿಸಲು ಭಾರತದಿಂದ ಸಾಧ್ಯ: ಇಟಲಿ ಪ್ರಧಾನಿ
ಕೆಲವು ದಿನಗಳ ಹಿಂದೆಯಷ್ಟೇ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿಜಗತ್ತಿನ ಅತಿ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪವನ್ನು ಪತ್ತೆ ಮಾಡಲಾಗಿದೆ ಎಂದು ಚೀನಾ ಹೇಳಿಕೊಂಡಿತ್ತು. ದಕ್ಷಿಣ ಚೀನಾ ಸಮುದ್ರ ವಿಶ್ವದ ಅತ್ಯಂತ ಜನನಿಬಿಡ ಹಡಗು ಮಾರ್ಗಗಳಲ್ಲಿ ಒಂದು ಎನಿಸಿಕೊಂಡಿದೆ.