ಹುಂಟಿಂಗ್ಟನ್: ಕ್ಯಾಲಿಫೋರ್ನಿಯಾದ ಹುಂಟಿಗ್ಟನ್ ಕಡಲ ತೀರದಲ್ಲಿ ಭಾರಿ ಪ್ರಮಾಣದ ತೈಲ ಸೋರಿಕೆಯಿಂದ ಕಡಲ ತೀರ ಕಲುಷಿತಗೊಂಡು, ಸಾವಿರಾರು ಪ್ರಾಣಿ, ಪಕ್ಷಿಗಳು ಮೃತಪಟ್ಟಿವೆ.
ಈ ಭಾಗದಲ್ಲಿ ಸಂಭವಿಸಿರುವ ದೊಡ್ಡ ತೈಲ ಸೋರಿಕೆ ಪ್ರಕರಣ ಇದಾಗಿದೆ. ತೈಲ ಸೋರಿಕೆಯಿಂದಾಗಿ ಪೆಸಿಫಿಕ್ ವೈಮಾನಿಕ ಪ್ರದರ್ಶನದ ಕೊನೆಯ ದಿನದ ಪ್ರದರ್ಶನವನ್ನು ರದ್ದುಪಡಿಸಲಾಗಿದೆ.
ಸಮುದ್ರದೊಳಗೆ ಇರುವ ತೈಲ ಸಂಗ್ರಹಣಾ ಸ್ಥಳದಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಪೈಪ್ ಒಡೆದು ಹೋದುದರಿಂದ 1,26,000 ಗ್ಯಾಲನ್ ತೈಲ ಸೋರಿಕೆಯಾಗಿದೆ.
ಪೈಪ್ ದುರಸ್ತಿ ಮಾಡಲಾಗಿದ್ದರೂ, ಭಾರಿ ಪ್ರಮಾಣದ ತೈಲ ಸೋರಿದ್ದರಿಂದ ಕರಾವಳಿ ಭಾಗದಲ್ಲಿ ಜಲಚರಗಳ ಮಾರಣ ಹೋಮ ನಡೆದಿದೆ.
1990ರ ಫೆಬ್ರುವರಿಯಲ್ಲಿ ಆರೆಂಜ್ ಕೌಂಟಿ ಕಡಲ ತೀರದಲ್ಲಿ ‘ಅಮೆರಿಕನ್ ಟ್ರೇಡರ್’ ಎಂಬ ತೈಲ ಟ್ಯಾಂಕರ್ನ ಆಂಕರ್ ತುಂಡಾಗಿ ಸಂಭವಿಸಿದ ದುರಂತದಲ್ಲಿ 4.17 ಲಕ್ಷ ಗ್ಯಾಲನ್ ತೈಲ ಸೋರಿಕೆ, 2015ರಲ್ಲಿ ರೆಫುಜಿಯೊ ಸ್ಟೇಟ್ ಬೀಚ್ ಸಮೀಪ ತೈಲ ಪೈಪ್ಲೈನ್ ತುಂಡಾಗಿ 1.43 ಗ್ಯಾಲನ್ (5.41 ಲಕ್ಷ ಲೀಟರ್) ತೈಲ ಸೋರಿಕೆಯಾಗಿತ್ತು.