ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಗಡಿಯಾಚೆಗಿನ ಕಚ್ಚಾ ತೈಲ ಪೈಪ್‌ಲೈನ್ ಅನ್ನು ಮಾ.18ರಂದು ವರ್ಚುಯಲ್ ವ್ಯವಸ್ಥೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಉದ್ಘಾಟಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಬಾಂಗ್ಲಾ ವಿದೇಶಾಂಗ ಸಚಿವ ಡಾ.ಎ.ಕೆ.ಅಬ್ದುಲ್ ಮೊಮೆನ್, “346 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 130 ಕಿ.ಮೀ. ಉದ್ದದ ಭಾರತ-ಬಾಂಗ್ಲಾದೇಶ ಫ್ರೆಂಡ್‌ಶಿಪ್ ಪೈಪ್‌ಲೈನ್(ಐಬಿಎಫ್ಪಿ) ಅನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉಭಯ ದೇಶಗಳ ಪ್ರಧಾನಿಗಳು ಉದ್ಘಾಟಿಸಲಿದ್ದಾರೆ.
ಭಾರತದಿಂದ ಪೈಪ್‌ಲೈನ್ ಮೂಲಕ ಬಾಂಗ್ಲಾಗೆ ಡೀಸೆಲ್ ರವಾನೆಯಾಗಲಿದೆ’ ಎಂದು ತಿಳಿಸಿದರು.