Sunday, 15th December 2024

ಸೆನೆಗಲ್‌ ನಲ್ಲಿ ಒಮಿಕ್ರಾನ್ ಮೊದಲ ಪ್ರಕರಣ ಪತ್ತೆ

Senegal

ಸೆನೆಗಲ್‌: ಪಶ್ಚಿಮ ಆಫ್ರಿಕಾದ ಸೆನೆಗಲ್‌ ನಲ್ಲಿ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಸೋಂಕಿನ ಮೊದಲ ಪ್ರಕರಣ ದಾಖಲಿಸಿದೆ.

ಈ ಮೂಲಕ ಆಫ್ರಿಕಾದ ನೈಜೀರಿಯಾ ಹಾಗೂ ಘಾನಾ ಬಳಿಕ ಒಮಿಕ್ರಾನ್ ಸೋಂಕಿನ ಪತ್ತೆ ಮಾಡಿದ ದೇಶ ಸೆನೆಗಲ್ ಆಗಿದೆ. 

ಮತ್ತೊಂದು ದೇಶದಿಂದ ಸೆನೆಗಲ್‌ಗೆ ಆಗಮಿಸಿದ 58 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಈ ಪ್ರಕರಣ ಮೊದಲ ಬಾರಿಗೆ ಪತ್ತೆಯಾಗಿದೆ. ಈ ವ್ಯಕ್ತಿಗೆ ಏಪ್ರಿಲ್‌ನಲ್ಲಿ ಅಸ್ಟ್ರೆಜ಼ೆಂಕಾ ಹಾಗೂ ಜೂನ್‌ನಲ್ಲಿ ಫೈಜ಼ರ್‌ ಲಸಿಕೆ ನೀಡಲಾಗಿದೆ.

ಸೋಂಕಿತನು ರಾಜಧಾನಿ ಡಕಾರ್‌ನ ಹೊಟೇಲ್ ಒಂದರಲ್ಲಿ ನೆಲೆಗೊಂಡಿದ್ದಾರೆ.