Saturday, 7th September 2024

ತಮ್ಮ ಉದ್ಯೋಗಿಗಳಿಗೆ 1 ಲಕ್ಷ ಡಾಲರ್ ಬೋನಸ್‌ ಘೋಷಿಸಿದ ಲೇಡಿ ಬಾಸ್..!

ಸಿಡ್ನಿ: ದೊಡ್ಡ ಕಂಪನಿಗಳು ಇತ್ತೀಚೆಗೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಾಗ, ಲೇಡಿ ಬಾಸ್ ತನ್ನ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಬೋನಸ್ ಘೋಷಿಸಿದ್ದಾರೆ.

ಪ್ರತಿ ಉದ್ಯೋಗಿಗೆ 1 ಲಕ್ಷ ಡಾಲರ್ ಅಂದರೆ ನಮ್ಮ ಭಾರತೀಯ ಕರೆನ್ಸಿಯಲ್ಲಿ ಸುಮಾರು 82 ಲಕ್ಷ ರೂಪಾಯಿ.

ಬೋನಸ್‌ ಪಡೆದ ಉದ್ಯೋಗಿಗಳ ಹೆಸರು ಘೋಷಣೆ ಮಾಡುತ್ತಿದ್ದಂತೆ ಎಲ್ಲರೂ ಒಮ್ಮೆಲೆ ಆಶ್ಚರ್ಯಕ್ಕೆ ಒಳಗಾದರು. ಲೇಡಿ ಬಾಸ್ ತಲಾ ನೂರು ಸಾವಿರ ಡಾಲರ್ ಬೋನಸ್ ಘೋಷಿಸಿ ಉದ್ಯೋಗಿಗಳನ್ನು ಹುಬ್ಬೇರಿಸುವಂತೆ ಮಾಡಿದೆ.

ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಕಂಪನಿಗಳಲ್ಲಿ ರಾಯ್ ಹಿಲ್ ಒಂದು. ಕಂಪನಿಯನ್ನು ರೈನ್ ಹಾರ್ಟ್ ಎಂಬ ಮಹಿಳೆ ನಡೆಸುತ್ತಿದ್ದಾರೆ. ರೆನ್‌ಹಾರ್ಟ್ ಅವರು ಆಸ್ಟ್ರೇಲಿಯಾದ ಗಣಿಗಾರಿಕೆ ಮತ್ತು ಕೃಷಿ ಕಂಪನಿ (ಗಿನಾ) ಹ್ಯಾನ್‌ಕಾಕ್ ಪ್ರಾಸ್ಪೆ ಕ್ಟಿಂಗ್‌ನ ಕಾರ್ಯನಿರ್ವಾಹಕ ಅಧ್ಯಕ್ಷ-ಕಮ್-ನಿರ್ದೇಶಕರಾಗಿದ್ದಾರೆ.

$ 34 ಬಿಲಿಯನ್ ಸಂಪತ್ತನ್ನು ಹೊಂದಿರುವ ಆಸ್ಟ್ರೇಲಿಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು.

ಆಕೆಯ ತಂದೆ ಸ್ಥಾಪಿಸಿದ ಕಂಪನಿಯ ಉದ್ಯೋಗಿಗಳೊಂದಿಗೆ ಸಭೆ ನಡೆಸಿ ಸಂಸ್ಥೆಯ 10 ಮಂದಿ ನೌಕರರ ಹೆಸರನ್ನು ಓದಿದ್ದಾರೆ. ತಮ್ಮನ್ನು ಕೆಲಸದಿಂದ ವಜಾ ಮಾಡಲು ಹೆಸರು ಕರೆದಿದ್ದಾರೆ ಎಂದುಕೊಂಡಿದ್ದ ಸಿಬ್ಬಂದಿಗೆ ಕ್ರಿಸ್ ಮಸ್ ಬೋನಸ್ ಆಗಿ ಆ 10 ಉದ್ಯೋಗಿಗಳಿಗೆ ತಲಾ ಒಂದು ಲಕ್ಷ ಅಮೆರಿಕನ್ ಡಾಲರ್ (ಸುಮಾರು 82 ಲಕ್ಷ ರೂ.) ಬೋನಸ್ ನೀಡುತ್ತಿರುವುದಾಗಿ ಘೋಷಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ.

ಬೋನಸ್ ಪಡೆಯಲಿರುವ ಹತ್ತು ಜನರಲ್ಲಿ ಮೂರು ತಿಂಗಳ ಹಿಂದೆ ಕಂಪನಿಗೆ ಸೇರಿದ ಉದ್ಯೋಗಿಯೂ ಇದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಕಂಪನಿಯು ಒಂದು ವರ್ಷದಲ್ಲಿ $3.3 ಶತಕೋಟಿ ಲಾಭವನ್ನು ಗಳಿಸಿತು.

error: Content is protected !!