Thursday, 12th December 2024

ಶ್ರೀಲಂಕಾದಲ್ಲಿ ಶಾಲೆಗಳಿಗೆ ಒಂದು ವಾರ ರಜೆ

ಕೊಲಂಬೊ: ಮಕ್ಕಳನ್ನು ತರಗತಿಗೆ ಕರೆದೊಯ್ಯಲು ಶಿಕ್ಷಕರು ಮತ್ತು ಪೋಷಕ ರಿಗೆ ಇಂಧನದ ಕೊರತೆ ಉಂಟಾದ ಕಾರಣ ಶಾಲೆಗಳಿಗೆ ರಜೆ ನೀಡಲಾಗಿದೆ. ಒಂದು ವಾರಗಳ ಕಾಲ ರಜೆಯನ್ನು ವಿಸ್ತರಣೆ ಮಾಡಲಾಗಿದೆ.

ಯಾವುದೇ ಪೂರೈಕೆದಾರರು ಸಾಲದ ಮೇಲೆ ಇಂಧನ ಮಾರಾಟ ಮಾಡಲು ಸಿದ್ಧರಿಲ್ಲ. ಸದ್ಯದ ಸ್ಥಿತಿಯಲ್ಲಿ ಶ್ರೀಲಂಕಾದ ಜನರಿಗೆ ಹಣ ಹುಡುಕುವುದು ಒಂದು ಸವಾಲಾಗಿದೆ, ಇದು ದೊಡ್ಡ ಸವಾಲು” ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಶೇಖರ ತಿಳಿಸಿದರು.

40,000 ಮೆಟ್ರಿಕ್ ಟನ್ ಡೀಸೆಲ್ ಹೊಂದಿರುವ ಮೊದಲ ಹಡಗು ಶುಕ್ರವಾರ ಬರುವ ನಿರೀಕ್ಷೆಯಿದೆ ಮತ್ತು ಗ್ಯಾಸೋಲಿನ್ ಸಾಗಿಸುವ ಮೊದಲ ಹಡಗು ಜು.22 ರಂದು ಬರಲಿದೆ ಎಂದು ಹೇಳಿದರು.

ಇಂಧನಕ್ಕಾಗಿ 587 ಮಿಲಿಯನ್ ಡಾಲರ್‌ ಪಾವತಿಸಬೇಕಿದೆ. ಆ ಹಣವನ್ನು ಹೊಂದಿಸಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ ಎಂದು ಹೇಳಿದರು. ಇಂಧನ ಪೂರೈಕೆದಾರರಿಗೆ ಶ್ರೀಲಂಕಾ ಸುಮಾರು 800 ಮಿಲಿಯನ್ ಡಾಲರ್ ಬಾಕಿ ಉಳಿಸಿಕೊಂಡಿದೆ ಎಂದು ವಿಜೆಶೇಖರ ಹೇಳಿದರು.

ಕಳೆದ ತಿಂಗಳು, ಇಂಧನ ಕೊರತೆಯಿಂದಾಗಿ ದೇಶಾದ್ಯಂತ ಶಾಲೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಲಾಗಿತ್ತು ಮತ್ತು ನಗರ ಪ್ರದೇಶಗಳಲ್ಲಿ ಕಳೆದ ಎರಡು ವಾರಗಳಿಂದ ಮುಚ್ಚಲಾಗಿತ್ತು.