ಬೆಂಗಳೂರು: ಬ್ರೈನ್ ಡೆಡ್ (brain dead) ಎಂದು ವೈದ್ಯರು ಘೋಷಿಸಿದ ವ್ಯಕ್ತಿಯೊಬ್ಬರ ಅಂಗಾಂಗವನ್ನು ದಾನ ಮಾಡಲು ಮುಂದಾಗಿದ್ದು ((Organ Donor) ) ಅವರ ಹೃದಯವನ್ನು ತೆಗೆಯುವಾಗ ಅಳುತ್ತಾ ಎದ್ದು ಕುಳಿತ ಪ್ರಕರಣ ನಡೆದಿದೆ. ಈ ಘಟನೆ ನಡೆದಿರುವುದು ಅಮೆರಿಕದಲ್ಲಿ. ಈ ಘಟನೆ ನಡೆದಿರುವುದು ಅಮೆರಿಕದಲ್ಲಿ. ಅಂಗಾಂಗ ದಾನಕ್ಕೆ (Organ Donor) ಸಿದ್ಧಗೊಳಿಸಿದ್ದ ವ್ಯಕ್ತಿ ಆಪರೇಟಿಂಗ್ ಟೇಬಲ್ ಮೇಲೆ ಎಚ್ಚರಗೊಂಡ ಕಾರಣ ವೈದ್ಯರೇ ಆಘಾತಕ್ಕೆ ಒಳಗಾಗಿದ್ದಾರೆ.
2021ರ ಅಕ್ಟೋಬರ್ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಔಷಧದ ಮಿತಿಮೀರಿದ ಸೇವನೆಯಿಂದ ಹೃದಯ ಸ್ತಂಭನಕ್ಕೆ ಒಳಗಾದ ಥಾಮಸ್ ಟಿ.ಜೆ. ಹೂವರ್ ಅವರನ್ನು ಕೆಂಟುಕಿಯ ಬ್ಯಾಪ್ಟಿಸ್ಟ್ ಹೆಲ್ತ್ ರಿಚ್ಮಂಡ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಬ್ರೈನ್ ಡೆಡ್ ಎಂದು ಘೋಷಿಸಿದರು. ಬಳಿಕ ಅವರ ಅಂಗಗಳು ದಾನಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ಮುಂದಾದರು. ಆದರೆ ಹೂವರ್ ಅವರನ್ನು ಶಸ್ತ್ರಚಿಕಿತ್ಸಾ ಕೋಣೆಗೆ ಕರೆದುಕೊಂಡು ಹೋದ ಬಳಿಕ ಅವರು ಜೀವಂತವಾಗಿರುವ ಕೆಲವು ಲಕ್ಷಣಗಳನ್ನು ತೋರಿಸಿದರು. ಇದನ್ನು ಆಸ್ಪತ್ರೆ ಸಿಬ್ಬಂದಿ ಗಮನಿಸಿದರು. ಬಳಿಕ ದಾನ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು.
ಕೈಕಾಲುಗಳನ್ನು ಅಲ್ಲಾಡಿಸುತ್ತಿದ್ದ ಅವರ ಕಣ್ಣಲ್ಲಿ ನೀರು ಬರುತ್ತಿತ್ತು, ಅವರು ಅಳುತ್ತಿದ್ದರು ಎಂದು ಆಸ್ಪತ್ರೆ ಸಿಬ್ಬಂದಿ ನತಾಶಾ ಮಿಲ್ಲರ್ ಹೇಳಿದ್ದಾರೆ. ಹೀಗಾಗಿ ಹೃದಯವನ್ನು ತೆಗೆಯುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದರು.
ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಅಂಗಾಂಗ ದಾನಿಯ ಈ ಪರಿಸ್ಥಿತಿ ಸಿಬ್ಬಂದಿಗೆ ಆಘಾತವಾಗಿತ್ತು. ಇಬ್ಬರು ವೈದ್ಯರು ಶಸ್ತ್ರಚಿಕಿತ್ಸೆ ಮುಂದುವರಿಸಲು ನಿರಾಕರಿಸಿದ್ದರು. ಆದರೆ ಕೆಂಟುಕಿ ಅಂಗ ದಾನಿ ಸಂಸ್ಥೆಯ (ಕೋಡಾ) ಸಂಯೋಜಕರು ಅಂಗಾಂಗ ತೆಗೆಯುವ ಪ್ರಕ್ರಿಯೆಯನ್ನು ಮುಂದುವರಿಸಲು ನಿರ್ಧರಿಸಿದ್ದರು. ಹೀಗಾಗಿ ಬೇರೆ ವೈದ್ಯರ ನೇಮಕಕ್ಕೆ ಮುಂದಾಗಿದ್ದರು.
ದಾನಿ ಜೀವಂತ ಇರುವಾಗ ತೆಗೆಯುವುದು ಕಷ್ಟ ಎಂದು ಅವರು ಹೇಳಿದ್ದರು. ಆದರೆ ವೈದ್ಯರು ಆತನ ಹೃದಯ ಕಸಿ ಮಾಡಲು ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಲು ತೊಡಗಿದಾಗ ಹೂವರ್ ಕಾಲು ಅಲ್ಲಾಡಿಸಲು ಪ್ರಾರಂಭಿಸಿದ್ದರು.
ದಾನಿಯ ಸಹೋದರಿ ಡೊನ್ನಾ ರೋರರ್ ಅವರು ತೀವ್ರ ನಿಗಾ ಘಟಕದಿಂದ ಶಸ್ತ್ರಚಿಕಿತ್ಸಾ ಕೊಠಡಿಯತ್ತ ನೋಡುತ್ತಿದ್ದಾಗ ಸಹೋದರ ಹೂವರ್ ಕಣ್ಣುಗಳನ್ನು ತೆರೆದಿದ್ದರು ಎನ್ನಲಾಗಿದೆ. ಬಳಿಕ ಅಂಗಾಂಗ ದಾನದ ಯೋಜನೆಯನ್ನು ರದ್ದುಗೊಳಿಸಲಾಗಿತ್ತು.
Yahya Sinwar: ಹಮಾಸ್ ನಾಯಕ ಯಾಹ್ಯಾ ಸಿನ್ವರ್ನನ್ನು ಹತ್ಯೆಗೈದು ಬೆರಳು ಕತ್ತರಿಸಿದ ಇಸ್ರೇಲ್ ಸೈನಿಕರು; ಕಾರಣವೇನು?
ತನಿಖಾಧಿಕಾರಿಗಳು ಈ ವಿಷಯವನ್ನು ಪರಿಶೀಲಿಸುತ್ತಿರುವುದಾಗಿ ಕೆಂಟುಕಿಯ ರಾಜ್ಯ ಅಟಾರ್ನಿ ಜನರಲ್ ಹೇಳಿದ್ದಾರೆ. ಫೆಡ್ನ ಆರೋಗ್ಯ ಸಂಪನ್ಮೂಲ ಮತ್ತು ಸೇವೆಗಳ ಆಡಳಿತವು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದೆ.
ಹೂವರ್ ಪ್ರಸ್ತುತ ತಮ್ಮ ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅವರ ನೆನಪು, ನಡಿಗೆ ಮತ್ತು ಮಾತನಾಡುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.