Friday, 22nd November 2024

ಪಾಕಿಸ್ತಾನದಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ

ಸ್ಲಮಾಬಾದ್:‌ ಪಾಕಿಸ್ತಾನದಲ್ಲಿ ಗೋಧಿ ಸೇರಿದಂತೆ ಆಹಾರ ಧಾನ್ಯಗಳ ತೀವ್ರ ಕೊರತೆ ಸೃಷ್ಟಿಯಾಗಿದೆ.

ಜನ ದಂಗೆ ಏಳದಂತೆ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಯ ಭದ್ರತೆಯಲ್ಲಿ ಗೋಧಿ ಹಿಟ್ಟಿನ ಚೀಲ ಗಳನ್ನು ಸಾಗಿಸಲಾಗುತ್ತಿದೆ.

ಸಿಂಧ್‌ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿಗೆ ಜನ ನೂಕುನುಗ್ಗಲು ಸೃಷ್ಟಿ ಯಾಗಿದೆ. ನೂಕು ನುಗ್ಗಲಿಗೆ ಪ್ರಾಂತ್ಯ ವೊಂದರಲ್ಲಿ ಒಬ್ಬ ಬಲಿಯಾಗಿರುವ ಬಗ್ಗೆಯೂ ವರದಿಯಾಗಿದೆ.

ಮಾರುಕಟ್ಟೆಯಲ್ಲಿ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ಪಡೆಯಲು ಸಾವಿರಾರು ಮಂದಿ ಗಂಟೆಗಟ್ಟಲೆ ಸರದಿಯಲ್ಲಿ ಕಾಯು ತ್ತಿದ್ದಾರೆ. ತಾಳ್ಮೆ ಕಳೆದುಕೊಂಡ ಜನತೆ ವಾಗ್ವಾದ, ತಳ್ಳಾಟ, ನೂಕುನುಗ್ಗಲು ನಡೆಸುತ್ತಿದ್ದಾರೆ.

ಕರಾಚಿಯಲ್ಲಿ ಪ್ರತಿ ಕಿಲೋ ಗೋಧಿ ಹಿಟ್ಟಿನ ದರ 160 ರೂ.ಗೆ ಜಿಗಿದಿದೆ. ಇಸ್ಲಾಮಾಬಾದ್‌ ಮ್ತು ಪೇಶಾವರದಲ್ಲಿ 10 ಕೆಜಿ ಹಿಟ್ಟಿನ ಚೀಲದ ದರ 1500 ರೂ.ಗೆ ಏರಿದೆ. 20 ಕೆಜಿ ಚೀಲದ ದರ 2,800 ರೂ.ಗೆ ವೃದ್ಧಿಸಿದೆ.

ಖೈಬರ್‌ ಪಂಖ್ತೂನ್‌ಖ್ವಾ ಪ್ರಾಂತ್ಯದಲ್ಲಿ 20 ಕೆ.ಜಿ ಗೋಧಿ ಹಿಟ್ಟಿನ ದರ 3,100 ರೂ.ಗೆ ಜಿಗಿದಿದೆ.

 
Read E-Paper click here