Thursday, 12th December 2024

ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ: ಮಾಲ್‌, ಮಾರ್ಕೆಟ್‌ ಮುಚ್ಚುಗಡೆ

ಸ್ಲಾಮಾಬಾದ್‌: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಪಾರಾಗಲು ಹೆಣಗಾಡುತ್ತಿರುವ ಪಾಕಿಸ್ತಾನದಲ್ಲಿ ದಿನಕ್ಕೊಂದು ಸವಾಲು ಎದುರಾಗುತ್ತಿದ್ದು, ಇತ್ತೀಚಿಗೆ ತನ್ನ ಪ್ರಜೆಗಳಿಗೆ ಚಹಾ ತ್ಯಜಿಸಿ ಎಂದಿದ್ದ ಪಾಕ್‌, ಈಗ ಇಂಧನ ಉಳಿತಾಯಕ್ಕಾಗಿ ಮಾಲ್‌, ಮಾರ್ಕೆಟ್‌, ಮದುವೆ ಮಂಟಪಗಳನ್ನು ಮುಚ್ಚುವುದಾಗಿ ಘೋಷಿಸಿದೆ.

ಇನ್ನು ಮುಂದೆ ದೇಶದ ಎಲ್ಲ ಮಾರುಕಟ್ಟೆ ಹಾಗೂ ಮಾಲ್‌ಗ‌ಳನ್ನು ರಾತ್ರಿ 8.30ಕ್ಕೆ ಹಾಗೂ ಮದುವೆ ಮಂಟಪಗಳನ್ನು ರಾತ್ರಿ 10 ಗಂಟೆಗೆ ಮುಚ್ಚುವಂತೆ ಆದೇಶಿಸಲಾಗಿದೆ. ಇದರಿಂದ 60 ಶತಕೋಟಿ ರೂ. ಉಳಿತಾಯವಾಗಲಿದೆ ಎಂದು ರಕ್ಷಣಾ ಸಚಿವ ಖ್ವಾಜಾ ಆಸೀಫ್ ತಿಳಿಸಿದ್ದಾರೆ.

ಇದಲ್ಲದೆ, ಇಂಧನ ಉಳಿತಾಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಫೆ. 1ರಿಂದ ಹೈ ವೋಲ್ಟೆಜ್‌ ಬಲ್ಬ್ಗಳು ಹಾಗೂ ಜುಲೈನಿಂದ ಅಸಮರ್ಥ ಫ್ಯಾನ್‌ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ. ಇದರಿಂದ 22 ಶತಕೋಟಿ ರೂ.ಉಳಿತಾಯವಾಗಲಿದೆ. ದೇಶಾದ್ಯಂತ ಗ್ಯಾಸ್‌ ಗೀಸರ್‌ಗಳ ಬಳಕೆ ಕಡಿಮೆ ಮಾಡುವ ಮೂಲಕ 92 ಶತಕೋಟಿ ರೂ. ಹಾಗೂ ಬೀದಿ ದೀಪಗಳ ಕಡಿಮೆ ಬಳಕೆ ಮೂಲಕ 4 ಶತಕೋಟಿ ರೂ.ಗಳನ್ನು ಉಳಿತಾಯ ಮಾಡಲು ಯೋಜಿಸಲಾಗಿದೆ ಎಂದಿದ್ದಾರೆ.

 
Read E-Paper click here