ಪ್ಯಾರಿಸ್: ಒಂದು ಲಾಕ್ಡೌನ್ ಮಾಡಿ, ಕಂಗಾಲಾಗಿದ್ದ ದೇಶಗಳು ಇದೀಗ ಎರಡನೇ ಬಾರಿಗೆ ಲಾಕ್ಡೌನ್ ಯೋಚನೆ ಮಾಡಲಾರಂಭಿಸಿವೆ.
ಫ್ರಾನ್ಸ್ನಲ್ಲಿ ರೂಪಾಂತರಿ ಕರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಲಾಕ್ಡೌನ್ ಜಾರಿ ಮಾಡ ಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಬೇರಾವುದನ್ನೂ ತೆರೆಯುವುದಕ್ಕೆ ಅವಕಾಶವಿಲ್ಲ. ಎಲ್ಲ ಕಚೇರಿಗಳನ್ನೂ 6 ಗಂಟೆಯೊಳಗೆ ಮುಚ್ಚಬೇಕು ಎಂದು ಫ್ರಾನ್ಸ್ ಸರ್ಕಾರ ಆದೇಶಿಸಿದೆ.
ಬೇರೆ ದೇಶಗಳಿಂದ ಫ್ರಾನ್ಸ್ಗೆ ಬರುವವರು ಕರೊನಾ ನೆಗೆಟಿವ್ ವರದಿ ತರುವುದು ಕಡ್ಡಾಯ ಮತ್ತು ಅವರು ಒಂದು ವಾರದ ಕ್ವಾರಂಟೈನ್ಗೆ ಒಳಗಾಗಲೇಬೇಕು ಎನ್ನುವ ನಿಯಮ ಜಾರಿಗೊಳಿಸಲಾಗಿದೆ. ಕರೊನಾದಿಂದಾಗಿ ಮೃತರಾದವರ ಪಟ್ಟಿಯಲ್ಲಿ ನಮ್ಮ ದೇಶ 7ನೇ ಸ್ಥಾನದಲ್ಲಿದೆ. ಅನೇಕ ದೇಶಗಳಿಗಿಂತ ಸುರಕ್ಷಿತ ಸ್ಥಾನದಲ್ಲಿ ನಾವಿದ್ದೇವಾದರೂ ಈ ಹಂತದಲ್ಲಿಯೇ ಮುಂಜಾಗ್ರತೆ ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಫ್ರಾನ್ಸ್ ಸರ್ಕಾರ ತಿಳಿಸಿದೆ.